ರಾಣೇಬೆನ್ನೂರಿನಲ್ಲಿ ಕೋಳಿವಾಡ ಅವರ 77ನೇ ಹುಟ್ಟುಹಬ್ಬ

ರಾಣೇಬೆನ್ನೂರು, ನ.3- ಅಭಿಮಾನಿಗಳ ಪ್ರೀತಿಯನ್ನು ತಿರಸ್ಕರಿಸಲಾಗದೆ ನನ್ನ 77 ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ವಿಧಾನಸಭಾ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು. 

ನಗರದ ತಮ್ಮ ಗೃಹ ಕಚೇರಿಯಲ್ಲಿ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ದೀಪ ಬೆಳಗಿಸುವ ಮೂಲಕ ಆಚರಿಸಿಕೊಂಡು ಮಾತನಾಡಿದ ಅವರು, ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಕೋವಿಡ್-19 ರ ನಿಯಮಾನುಸಾರ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳಿಗೆ ತಿಳಿಸಿದ್ದೆ. ಅದರಂತೆ  ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ರಾಜ್ಯ ಕೊರೊನಾ ಮುಕ್ತವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿರುವೆ ಎಂದರು.

ಅಭಿಮಾನಿಗಳು ಕೋವಿಡ್-19 ರ ನಿಯಮಾ ನುಸಾರ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಾರೀರಿಕ ಅಂತರ ಕಾಪಾಡಿ ಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಯಾವುದೇ ಕಾರಣಕ್ಕೂ ಮಾಲೆ, ಶಾಲು, ಉಡುಗೊರೆ ತರಬಾರದು. ಇಂತಹ ಪರಿಸ್ಥಿತಿ ಯಲ್ಲಿ ನಿಮ್ಮ ಪ್ರೀತಿಯಷ್ಟೇ ಸಾಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.

ಕೆಪಿಸಿಸಿ ಸದಸ್ಯ ಬಸನಗೌಡ ಮರದ್, ನಗರಸಭಾ ಸದಸ್ಯ ಪುಟ್ಟಪ್ಪ ಮರಿಯಮ್ಮನವರ್‌, ಜಿ.ಪಂ ಮಾಜಿ ಸದಸ್ಯ ಕೃಷ್ಣಪ್ಪ ಕಂಬಳಿ, ಶೇರುಖಾನ್‌ ಕಾಬೂಲಿ, ನಾಗರಾಜ್ ಮಾಕನೂರ್‌, ಸುರೇಶ್‌ ಜಾಡಮಾಲಿ, ರಮೇಶ್‌ ಬಿಸಲಳ್ಳಿ, ಕೆ.ಡಿ.ಸಾವುಕಾರ, ಚಂಪಾ ಬಿಸಲಳ್ಳಿ, ಭಾರತಿ ಸುರಹೊನ್ನಿ, ಜಯಶ್ರೀ ಪಸೆ ಸೇರಿದಂತೆ ಅಭಿಮಾನಿಗಳು ಇದ್ದರು

error: Content is protected !!