ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಡಾ. ಸುರೇಶ್
ರಾಣೇಬೆನ್ನೂರು, ಅ. 3- ಗಾಂಧಿ ತತ್ವಗಳು ಎಲ್ಲಾ ಶತಮಾನಗಳಲ್ಲಿ ಅಮರವಾಗಿ ಉಳಿಯುತ್ತವೆ. ಅವನ್ನು ಪಾಲನೆ ಮಾಡುವ ನಾವೆಲ್ಲರೂ ಧನ್ಯರು ಎಂದು ಡಾ. ಸುರೇಶ್ ಸಿ.ಟಿ. ತಿಳಿಸಿದರು.
ಅವರು ನಗರದ ಹೊರವಲಯದಲ್ಲಿ ರೇನ್ಬೋ ರೆಸಿಡೆನ್ಷಿಯಲ್ ಪಬ್ಲಿಕ್ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್.ಎನ್. ಕಟ್ಟೀಮನಿ ಮಾತನಾಡಿ, ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರುಗಳ ಚಿಂತನೆಗಳು ಆಕರ್ಷಣೀಯ ಎಂದು ತಿಳಿಸಿದರು.
ಶಾಲಾ ಕಾರ್ಯದರ್ಶಿ ಐ.ಕೆ. ಮಾಲತೇಶ್, ಸಿ.ಟಿ. ವೀರಣ್ಣ, ಪ್ರಾಂಶುಪಾಲ ಎಸ್.ಎಂ. ಸಂಗಮೇಶ್, ಉಪ ಪ್ರಾಂಶುಪಾಲ ಝಾಕೀರ್ ಹುಸೇನ್, ಸಿ.ಎಲ್. ಲಮಾಣಿ ಉಪಸ್ಥಿತರಿದ್ದರು.
ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಸೇರಿ ಎ.ಎನ್. ಅಕ್ಷಯ್ ಮತ್ತು ಎಸ್.ಎನ್. ಜಗದೀಶ್ ನಿರ್ದೇಶನದಲ್ಲಿ ಕಿರುನಾಟಕ ಅಭಿನಯಿಸುವುದರ ಮೂಲಕ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಸಂದೇಶ ಹಾಗೂ ಮೌಲ್ಯಗಳನ್ನು ಸಾರಿದರು.