ರಾಣೇಬೆನ್ನೂರು, ಮಾ.19- ಸರ್ಕಾರದ ನಿಯಮಗಳನ್ನು ಕಡೆಗಣಿಸಿ, ನಿಯಮ ಬಾಹಿರವಾಗಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿ ರುವ ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವಂತೆ ನಗರಸಭೆ ಸದಸ್ಯ ನಿಂಗಪ್ಪ ಕೋಡಿಹಳ್ಳಿ ಅವರು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ದಿನಾಂಕ 2 ರಂದು ಈ ಪರ್ಕ್ಯೂರ್ ಮೆಂಟ್ ಪೋರ್ಟಲ್ ಮುಖಾಂತರ ಕರ್ನಾಟಕ ಸಾರ್ವಜನಿಕ ಸಂಗ್ರಹಣದಲ್ಲಿ ಪಾರದರ್ಶ ಕತೆ ಆದ್ಯಾದೇಶ ಆಕ್ಟ್ ನಿಯಮ ದಂತೆ 666 ಲಕ್ಷ ರೂಪಾಯಿಯ 40 ಕಾಮಗಾರಿ ಗಳ ಟೆಂಡರ್ ಕರೆದಿದ್ದು ಅವುಗ ಳಲ್ಲಿ ಸುಮಾರು ಕೆಲಸಗಳನ್ನು ಪ್ರಾಧಿಕಾರ ಹಾಗೂ ನಗರಸಭೆ ಒಪ್ಪಿಗೆ ಪಡೆಯದೆ ತಮಗೆ ಬೇಕಾದವರಿಂದ ನಿಯಮ ಬಾಹಿರವಾಗಿ ಕಾಮ ಗಾರಿ ಮಾಡಿಸಿದ್ದಾರೆ ಎಂದು ಕೋಡಿಹಳ್ಳಿ ಆರೋಪಿಸಿದ್ದಾರೆ.
ನಗರದ ಜನತೆಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಅನುದಾನ ದುರ್ಬಳಕೆ ಮಾಡಿರು ವುದು ನಗರಸಭೆ ಇತಿಹಾಸದಲ್ಲಿ ಇದು ಪ್ರಥಮ ವಾಗಿದ್ದು, ನಗರಾಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿರುವ ಸದಸ್ಯ ಕೋಡಿಹಳ್ಳಿ ಅವರು, ಮುಂದಿನ ದಿನಗಳಲ್ಲಿ ನಗರ ಬಂದ್ ಕರೆದು ಹೋ ರಾಟ ಮಾಡಲಾಗುವುದು ಎಂದು ಹೇಳಿದ್ದಾರೆ.