ರಾಣೇಬೆನ್ನೂರಿನ ಶನೈಶ್ಚರ ಮಂದಿರದ ಮಂಡಲೋತ್ಸವದಲ್ಲಿ ಡಾ. ಕೇಲಗಾರ್
ರಾಣೇಬೆನ್ನೂರು, ಏ.15- ಹೆಚ್ಚುತ್ತಿರುವ ಆಧುನೀಕತೆ ಮತ್ತು ವಿದೇಶಿ ವ್ಯಾಮೋಹದಿಂದ ಭಾರತೀಯ ಸಂಸ್ಕೃತಿಗೆ ಕಪ್ಪುಚುಕ್ಕೆಯಾಗುತ್ತಿರು ವುದು ಬಹಳಷ್ಟು ವಿಷಾದನೀಯ ಸಂಗತಿಯಾಗಿದೆ. ಈ ಮಧ್ಯೆ ಮಠ, ಮಂದಿರ ಮತ್ತು ಅಧ್ಯಾ ತ್ಮಿಕತೆ ಹಾಗೂ ಧಾರ್ಮಿಕತೆಯಿಂದ ಅವನತಿ ಯಾಗುತ್ತಿರುವ ಭಾರತೀಯ ಸಂಸ್ಕೃತಿಯು ಮತ್ತೆ ಪುನರುತ್ಥಾನ ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ವೈದ್ಯ ಡಾ. ಬಸವರಾಜ ಎಸ್. ಕೇಲಗಾರ ಅಭಿಪ್ರಾಯಪಟ್ಟರು.
ನಗರದ ಹೊರವಲಯದಲ್ಲಿರುವ ಹಿರೇಮಠದ ಶನೈಶ್ಚರ ಸ್ವಾಮಿ ಮಂದಿರದ ಆವರಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಪ್ರದೇಶಾಭಿವೃದ್ಧಿಗಾಗಿ ನಿರಂತರ 384 ದಿನಗಳ ಕಾಲದ ಮಹಾಮೃತ್ಯುಂಜಯ ಜಪ, ಯಾಗ, ಶ್ರೀ ದುರ್ಗಾ ಜಪ, ಹವನ ಮತ್ತು ದೀಪದುರ್ಗಾ ನಮಸ್ಕಾರ ಪೂಜೆಯ ಧಾರ್ಮಿಕ ಧರ್ಮಯಜ್ಞ ಮನುಕುಲ ಸದ್ಭಾವನಾ ಧರ್ಮ ಸಮಾರಂಭದ ನಿಮಿತ್ಯ ಹಮ್ಮಿಕೊಂಡಿದ್ದ ತೃತೀಯ ಮಂಡಲೋತ್ಸವ (48 ದಿನಗಳ ಕಾಲದ ಕಾರ್ಯಕ್ರಮವು ಒಂದು ಮಂಡಲಕ್ಕೆ ಸಮ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೇತೃತ್ವ ವಹಿಸಿದ್ದ ಶ್ರೀಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಮಹಾಮೃತ್ಯುಂಜಯ ಹೋಮ ಮತ್ತು ಮಂತ್ರಕ್ಕೆ ಅಗಾಧವಾದ ಶಕ್ತಿ ಇದೆ. ಎಂತಹ ಸಮಸ್ಯೆ ಇದ್ದರೂ ಅದನ್ನು ನಿವಾರಿಸುವ ದಿವ್ಯ ಔಷಧಿ ಅದರಲ್ಲಿ ಅಡಗಿದೆ. ಭಾರತೀಯ ಸಂಸ್ಕೃತಿಯಿಂದ ದೂರವಿದ್ದ ಅಮೆರಿಕ ದೇಶವೂ ಸಹ ಕೊರೊನಾ ನಿಯಂತ್ರಣಕ್ಕಾಗಿ ಕೊನೆಗೆ ಮಹಾ ಮೃತ್ಯುಂಜಯ ಹೋಮ ಮತ್ತು ಮಂತ್ರಕ್ಕೆ ಮೊರೆ ಹೋಗಿರುವುದೇ ಇದಕ್ಕೆ ನೈಜ ಸಾಕ್ಷಿಯಾಗಿದೆ ಎಂದರು.
ವೇದ ಸಂಸ್ಕೃತಿಗೂ ಸಹ ಅದರದೇ ಆದ ಶಕ್ತಿಯಿದ್ದು, ಪ್ರಕೃತಿಯನ್ನು ಸಹ ಸುಲಲಿತವಾಗಿ ಇಟ್ಟುಕೊಳ್ಳುವ ಮೂಲಕ ಆರೋಗ್ಯಪೂರ್ಣ ವಾತಾವರಣ ನಿರ್ಮಾಣ ಮಾಡಲು ಸಹಕಾರಿಯಾಗುತ್ತದೆ. ಇಂದು ಇಡೀ ವಿಶ್ವವೇ ಕೋವಿಡ್ನಿಂದ ಬಳಲುತ್ತಿದ್ದು, ಇದರಿಂದ ಜನರು ಭಯ, ಭೀತಿಯಿಂದ ಬದುಕುವಂತಾಗಿದೆ. ಈ ಕಾರಣದಿಂದ ಕೊರೊನಾ ಮುಕ್ತ ಮಾಡಲು ಅನೇಕ ಹೋಮ, ಹವನ, ಪೂಜೆ, ಮಂತ್ರ, ಜಪ, ತಪಗಳು ಈ ಮಠದಲ್ಲಿ ನಿರಂತರವಾಗಿ 384 ದಿನಗಳ ಕಾಲ ಮುನ್ನಡೆಯುತ್ತಿವೆ ಎಂದರು.
ಹಿರೇಮಠ ಸಂಗೊಳ್ಳಿಯ ಶ್ರೀ ಗುರುಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಾರನಹಳ್ಳಿಯ ಶಿವಯೋಗಿ ಸ್ವಾಮೀಜಿ, ಸಮಿತಿಯ ಅಧ್ಯಕ್ಷ ಎಸ್.ಎಸ್ ರಾಮಲಿಂಗಣ್ಣನವರ, ಗ್ರಾಮೀಣ ಅಧ್ಯಕ್ಷ ಬಸವರಾಜ್ ಸವಣೂರ, ರವೀಂದ್ರಗೌಡ ಪಾಟೀಲ್, ಪುನೀತ, ಗುದ್ಲೇಶ್ವರ, ಪರಮೇಶಯ್ಯ, ಶಾಂತಯ್ಯ ಶಾಸ್ತ್ರಿಗಳು, ರೇಷ್ಮಾ ಬ್ಯಾತನಹಾಳ ಸೇರಿದಂತೆ ಪಾಠಶಾಲಾ ವಟುಗಳು, ಶಾಸ್ತ್ರಿಗಳು ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ನಿತ್ಯಾನಂದ ಕುಂದಾಪುರ, ನಿಂಗಪ್ಪ ಕಳ್ಳಿಮನಿ, ಲೋಕಪ್ಪ ಬಡಪ್ಪಳವರ, ರಾಮಪ್ಪ ರಾಮಪ್ಪನವರ, ಪ್ರಕಾಶ್ ಗೊಲ್ಲರ, ಎಸ್.ಡಿ ಹಿರೇಮಠ, ರಮೇಶ್ ಕಾಟೇನಹಳ್ಳಿ, ರಾಜಣ್ಣ ಪಾಟೀಲ, ಮಲ್ಲಿಕಾರ್ಜುನ ಲಕ್ಕಣ್ಣನವರ, ಅಶೋಕ ನಾಯಕ್, ಜ್ಯೋತಿ ಹಿರೇಮಠ ಸೇರಿದಂತೆ ಮತ್ತಿತರೆ ಸಾಧಕರಿಗೆ `ವಿಕಾಸ ಸಿರಿ’ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.