ಬೆಳೆ ನಷ್ಟ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ

ರಾಣೇಬೆನ್ನೂರು, ಜ.9-  ಅಕಾಲಿಕ ಮಳೆಯಿಂದಾಗಿ ಹೊಲದಲ್ಲಿದ್ದ ಬಿಳಿ ಜೋಳ, ಕಡಲೆ, ಗೋವಿನಜೋಳ ಮುಂ ತಾದ ಬೆಳೆಗಳು ಹಾಳಾಗಿವೆ. ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ನಷ್ಟದ ಪ್ರಮಾಣದ ವರದಿಯನ್ನು ನೀಡುವಂತೆ ತಿಳಿಸಲಾಗಿದ್ದು,  ಅಧಿಕಾರಿಗಳ ಎರಡು ತಂಡಗಳನ್ನು ರಚಿಸಿ ಕಾರ್ಯೋನ್ಮುಖಗೊಳಿ ಸಲಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು.

ಇಲ್ಲಿನ ಸಿದ್ದೇಶ್ವರ ವೇದಿಕೆಯಲ್ಲಿ  ಹಮ್ಮಿ ಕೊಂಡಿದ್ದ ಬಿಜೆಪಿ ಬೆಂಬಲಿತ ನೂತನ ಗ್ರಾ.ಪಂ. ಸದಸ್ಯರನ್ನು ಸನ್ಮಾನಿಸಿ ಅವರು ಮಾತ ನಾಡಿದರು.  ನನ್ನ ಕ್ಷೇತ್ರದ ಪ್ರತಿ ಪಂಚಾಯ್ತಿಗೆ ಒಂದು ಕೋಟಿ ವಿಶೇಷ ಅನುದಾನ ಹಾಗೂ ನಾಲ್ಕು ಸಾವಿರ ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಈ ಕುರಿತು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲಾಗುವುದು. ಕಾಂಗ್ರೆಸ್ ಭದ್ರಕೋಟೆಯಂತಿದ್ದ ಕೆಲ ಪಂಚಾಯ್ತಿಗಳಲ್ಲೂ ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವ ಗ್ರಾಮೀಣ ಭಾಗದ ಜನತೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಬಸವರಾಜ ಬೊಮ್ಮಾಯಿ ಅವರ ಬಗ್ಗೆ ಅಪಾರ ಅಭಿಮಾನವಿದೆ. ಹಾಗಾಗಿ  ವಿಶೇಷ ಅನು ದಾನ ಕೊಡಲು ಈರ್ವರೂ ಒಪ್ಪಿಗೆ ನೀಡ ಲಿದ್ದಾರೆಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಮುಕ್ಕಾಲು ಭಾಗದಷ್ಟು ಕಾಂಗ್ರೆಸ್ ಅನ್ನು ಸೋಲಿಸಿರುವ ನೀವು ಮುಂಬರುವ ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿಗಳ ಚುನಾವಣೆಯಲ್ಲಿ ನನ್ನ ಕ್ಷೇತ್ರದ 4 ಜಿ.ಪಂ. ಹಾಗೂ 23 ತಾ.ಪಂ. ಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಕಾಂಗ್ರೆಸ್ ಮುಕ್ತ ರಾಣೇಬೆನ್ನೂರು ವಿಧಾನಸಭಾ  ಕ್ಷೇತ್ರವನ್ನಾಗಿ ಮಾಡುವಂತೆ ಶಾಸಕರು ಕರೆ ನೀಡಿದರು.

ವೇದಿಕೆಯಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಕೇಲಗಾರ, ನಗರ ಅಧ್ಯಕ್ಷ  ದೀಪಕ್ ಹರಪನಹಳ್ಳಿ, ಮುಖಂಡ ರುಗಳಾದ ಎಸ್.ಎಸ್. ರಾಮಲಿಂಗಣ್ಣ ನವರ, ಭಾರತಿ ಜಂಬಗಿ, ಸಂತೋಷ ಪಾಟೀಲ, ಜಿಲ್ಲಾಧ್ಯಕ್ಷ ಸಿದ್ರಾಜ
ಕಲಕೋಟಿ, ಬಸವರಾಜ ಹುಲ್ಲತ್ತಿ, ಚೋಳಪ್ಪ ಕಸವಾಳ ಇನ್ನಿತರರಿದ್ದರು.

error: Content is protected !!