ನಿರುದ್ಯೋಗ ಮುಕ್ತಕ್ಕೆ ಮುನ್ನುಡಿ ಸರ್ಕಾರಿ ಕಾಲೇಜಿನಲ್ಲಿ ಬಿಸಿಎಗೆ ಚಾಲನೆ

ನಿರುದ್ಯೋಗ ಮುಕ್ತಕ್ಕೆ ಮುನ್ನುಡಿ  ಸರ್ಕಾರಿ ಕಾಲೇಜಿನಲ್ಲಿ ಬಿಸಿಎಗೆ ಚಾಲನೆ

ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ

ರಾಣೇಬೆನ್ನೂರು, ಆ.12- ಸ್ಪೋಕನ್ ಇಂಗ್ಲಿಷ್, ಕೌಶಲ್ಯ ತರಬೇತಿ ಹಾಗೂ ಕಂಪ್ಯೂಟರ್ ಜ್ಞಾನದ ಕೊರತೆಯಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಪದವಿ ಜೊತೆಗೆ ಈ ಪಾಠಗಳ ಅವಶ್ಯವಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಅವರು ಇಲ್ಲಿನ ಸರ್ಕಾರಿ ಕಾಲೇ ಜಿನಲ್ಲಿ ಬ್ಯಾಚುಲರ್ ಆಫ್ ಕಂಪ್ಯೂ ಟರ್ ಅಪ್ಲಿಕೇಷನ್‌ ಕೋರ್ಸ್ ಪ್ರಾರಂಭಿಸಿ ಮಾತನಾಡುತ್ತಿದ್ದರು.

ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಜೊತೆ ರಾಣೇಬೆನ್ನೂರು ನಿರುದ್ಯೋಗ ಮುಕ್ತ, ಹಾವೇರಿ ಜಿಲ್ಲೆ ಬರ ಮುಕ್ತದ ಎರಡು ಪ್ರತ್ಯೇಕ ಗ್ಯಾರಂಟಿಗಳನ್ನು ಚುನಾವಣೆ ಸಂದರ್ಭದಲ್ಲಿ  ಹೇಳಿದ್ದನ್ನು ನೆನೆಪಿಸಿಕೊಂಡು ಮಾತನಾಡಿದ ಶಾಸಕರು,  ಬಿಸಿಎ ಕೋರ್ಸ್ ಮಾಡಲು ಕನಿಷ್ಟ 80 ಸಾವಿರದಷ್ಟು ಹಣದ ಅವಶ್ಯಕತೆ ಇದೆ. ಆದರೆ ಇಲ್ಲಿ  10 ಸಾವಿರ ರೂ. ಖರ್ಚಾಗಲಿದೆ. ಅದು ಸ್ಕಾಲರ್ ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ಮರಳಿ ಸಿಗಲಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಬಡವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಇದ್ದು, ಅವರು ಸ್ವಾವಲಂಬಿಗಳಾಗಿ ಬದುಕಲು ಉದ್ಯೋಗ ಪೂರಕ ಇಂತಹ ಕೋರ್ಸ್‌ಗಳನ್ನು ಹೆಚ್ಚು ತೆರೆಯಬೇಕಿದೆ. ಅವುಗಳ ಸದುಪಯೋಗ ನಮ್ಮ ವಿದ್ಯಾರ್ಥಿಗಳಿಗೆ ದೊರಕಬೇಕು. ವಿದ್ಯಾರ್ಥಿನಿಯರು ಈ ದಿಶೆ ಯಲ್ಲಿ ಹೆಚ್ಚು ಚಿಂತನೆ ಮಾಡ ಬೇಕು. ಎಲ್ಲ ರೀತಿಯಿಂದಲೂ ಸ್ವಾವಲಂಬಿಗಳಾದರೆ ದೇಶದ ಪ್ರಗತಿ ಸಾಧ್ಯ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.

ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮುಕ್ತಾಯ ಹಾಗೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಹಾವೇರಿ ವಿ.ವಿ.ಯ ಕುಲಸಚಿವೆ ವಿಜಯಲಕ್ಷ್ಮಿ ತಿರ್ಲಾಪೂರ, ಪ್ರಾಂಶುಪಾಲ ಎಸ್ಕೆ ಪಾಟೀಲ್,  ಬಿ. ರವಿ, ಅರುಣಕುಮಾರ್, ಚಂದನ, ಡಾ. ರಾಘವೇಂದ್ರ, ಆರ್. ವಿಜಯಲಕ್ಷ್ಮಿ ಮತ್ತಿತರರಿದ್ದರು.

error: Content is protected !!