ಜ್ಞಾನ ಸಂಪಾದನೆಯಲ್ಲಿ ಉಜ್ವಲ ಬೆಳಕು ಕಾಣಬೇಕು

ಜ್ಞಾನ ಸಂಪಾದನೆಯಲ್ಲಿ ಉಜ್ವಲ ಬೆಳಕು ಕಾಣಬೇಕು

ರಾಣೇಬೆನ್ನೂರು ರಾಜ-ರಾಜೇಶ್ವರಿ ಕಾಲೇಜು ಸಮಾರಂಭದಲ್ಲಿ ಬಸವರಾಜ ಪಟ್ಟಣಶೆಟ್ಟಿ 

ರಾಣೇಬೆನ್ನೂರು, ಜು.29- ಕೆ.ಎಲ್.ಇ. ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣು ಮಕ್ಕಳ ಸಂಯುಕ್ತ ಪದವಿ-ಪೂರ್ವ ಕಾಲೇಜು   2023-24ನೇ ಸಾಲಿನ  ಕಾಲೇಜು ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ  ವಿದ್ಯಾರ್ಥಿನಿಯರಿಗೆ ಸ್ವಾಗತ ಸಮಾರಂಭ ಜರುಗಿತು. 

ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ  ಸದಸ್ಯ ಬಸವರಾಜ  ಎಸ್.ಪಟ್ಟಣಶೆಟ್ಟಿ  ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯಲ್ಲಿ ಉಜ್ವಲ ಬೆಳಕು ಕಾಣಬೇಕು, ಅದಕ್ಕೆ ಕೆ.ಎಲ್.ಇ. ಸಂಸ್ಥೆಯು ಎಲ್ಲಾ ರೀತಿಯ ಅನುಕೂಲ ಮಾಡಿಕೊಡುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಸಂಜೀವಿನಿ ಪ.ಪೂ. ಕಾಲೇಜು ಪ್ರಾಚಾರ್ಯರಾದ  ಪ್ರಭು ಕೊಡದ   ಇವರು, ಹಾಸ್ಯಭರಿತ ಮಾತುಗಳ ಮೂಲಕ ವಿದ್ಯಾರ್ಥಿಗಳ ನಡೆ, ನುಡಿ ಬಗ್ಗೆ ಹೇಳುತ್ತಾ, ಸದಾ ನಿಮ್ಮ ತಂದೆ-ತಾಯಿಗಳು ತಲೆ ಎತ್ತಿ ನಡೆಯವಂತೆ ಸಾಧನೆ ಮಾಡಿ ಕಾಲೇಜಿಗೆ ಮತ್ತು ರಾಜ್ಯಕ್ಕೆ ಕೀರ್ತಿ ತರುವಂತವರಾಗಬೇಕೆಂದು ಹೇಳಿದರು. 

ಮಕ್ಕಳು ರಾಷ್ಟ್ರಾಭಿಮಾನದ ಮೂಲಕ ವಿದ್ಯಾರ್ಜನೆ ಮಾಡಬೇಕೆಂದು ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ವೀರಣ್ಣ ಅಂಗಡಿ ತಿಳಿ ಹೇಳಿದರು. 

ಪ್ರಾಚಾರ್ಯ  ಎಫ್.ಎನ್.ಗುಡಿಕಟ್ಟಿ ಸ್ವಾಗತಿಸಿದರು.   ಪ್ರಾಸ್ತಾವಿಕ  ನುಡಿಯನ್ನು ಡಾ.ಚಂದ್ರಕಾಂತ ಆರ್.ಬಿ. ಹೇಳಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವ್ಹಿ.ಪಿ.ಲಿಂಗನಗೌಡರು ಮಾತನಾಡಿ, ವಿದ್ಯಾರ್ಥಿನಿಯರು ಗುಣಾತ್ಮಕ ಶಿಕ್ಷಣ ಪಡೆದು ಎಲ್ಲಾ ರಂಗದಲ್ಲಿ ಹೆಸರು ಮಾಡಬೇಕೆಂದು ಹೇಳುವುದರ ಜೊತೆಗೆ ಇನ್‍ಫೋಸಿಸ್ ಸಂಸ್ಥೆಯ ಶ್ರೀಮತಿ ಸುಧಾ ಮೂರ್ತಿಯವರ ಉದಾಹರಣೆ ನೀಡಿದರು.

ಬಿ. ಪ್ರೇಮ್‍ಕುಮಾರ್ ಅತಿಥಿಗಳನ್ನು ಪರಿಚಯಿಸಿದರು ಶ್ರೀಮತಿ ಸಂಗೀತಾ ಕುಲಕರ್ಣಿ ನಿರೂಪಿಸಿದರು.  ಆರ್.ಜಿ.ಕುರವತ್ತಿ ವಂದಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ಶರಣಪ್ಪ ಆರ್.ಜಿ. ಮತ್ತು ವರ್ತಕ ಉಮೇಶ್ ಗುಂಡಗಟ್ಟಿ, ವಿದ್ಯಾರ್ಥಿ ಕಾರ್ಯದರ್ಶಿ ಇಂದಿರಾ ಉಪ್ಪುಣಸಿ ಉಪಸ್ಥಿತರಿದ್ದರು.

error: Content is protected !!