ಬೆಳೆಗಳ ಮೌಲ್ಯವರ್ಧನೆಯಿಂದ ಲಾಭ

ಬೆಳೆಗಳ ಮೌಲ್ಯವರ್ಧನೆಯಿಂದ ಲಾಭ

ಹಿರೇ ಅರಕೆರೆ ರಾಗಿ ಕ್ಷೇತ್ರೋತ್ಸವದಲ್ಲಿ ಬೇಸಾಯ ತಜ್ಞ ಮಲ್ಲಿಕಾರ್ಜುನ್ 

ಜಗಳೂರು, ಮಾ.26- ತಾಲ್ಲೂಕಿನ ಹಿರೇ ಅರಕೆರೆ ಗ್ರಾಮದಲ್ಲಿ   ರಾಗಿ ಬೆಳೆಯ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.

ಐಸಿಎಆರ್-  ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಓ.  ಮಲ್ಲಿಕಾರ್ಜುನ್ ಮಾತನಾಡುತ್ತಾ, ರಾಗಿ ಬೆಳೆಯು ಕಟಾವಿನ ಹಂತದಲ್ಲಿದ್ದು, ನವೀನ ತಳಿಯಾದ ಒಐ- 365 ಉತ್ತಮವಾದ ಕಾಳು ಮತ್ತು ಮೇವಿಗೆ ಸೂಕ್ತವಾಗಿದೆ.  ರೈತರು ತಾವು ಬೆಳೆದ ಉತ್ಪನ್ನವನ್ನು ನೇರವಾಗಿ ಮಾರುವ ಬದಲು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದರು

ಈ ವರ್ಷ ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಕೇಂದ್ರ ಸರ್ಕಾರ ಘೋಷಿಸಿದ ಕಾರಣ ನಾವೆಲ್ಲರೂ ಸಿರಿಧಾನ್ಯ ಬೆಳೆಗಳಿಗೆ ಹೆಚ್ಚು ಒತ್ತು ಕೊಡ ಬೇಕು ಎಂದು ರೈತರಲ್ಲಿ ಅವರು ಮನವಿ ಮಾಡಿದರು. 

ಪ್ರಗತಿಪರ ರೈತ ರಾಜಣ್ಣ  ಮಾತನಾಡುತ್ತಾ, ಬೆಳೆಯು ಉತ್ತಮವಾಗಿದ್ದು, ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿದ್ದೇವೆ,  ಬೀಜೋತ್ಪಾದನೆ ಕಡೆ ರೈತರು ಹೆಚ್ಚು ಗಮನ ಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಪವನ್ ಪಾಟೀಲ್, ನವೀನ್, ಪ್ರಭಣ್ಣ ಮತ್ತು ಪ್ರಗತಿಪರ ರೈತರು ಭಾಗವಹಿಸಿದ್ದರು. 

error: Content is protected !!