ಜಗಳೂರು, ಫೆ.12- ತಾಲ್ಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ (ದಾವಣಗೆರೆ) ಇವರ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯ ಗುಚ್ಚ ಗ್ರಾಮಗಳ ಮುಂಚೂಣಿ ಪ್ರಾತ್ಯಕ್ಷಿಕೆಯ ಕಡಲೆ ಬೆಳೆಯ ಕ್ಷೇತ್ರೋತ್ಸವ ಆಚರಿಸಲಾಯಿತು.
ಕೇಂದ್ರದ ಬೇಸಾಯ ತಜ್ಞರಾದ ಬಿ.ಓ. ಮಲ್ಲಿಕಾರ್ಜುನ್ ಮಾತನಾಡುತ್ತಾ, ಸರಿಯಾದ ಸಮಯಕ್ಕೆ ಸರಿಯಾದ ತಂತ್ರಜ್ಞಾನದ ಬಳಕೆಯಿಂದ ಕಡಲೆ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಕಾಣಬಹುದು. ಬೀಜೋತ್ಪಾದನೆಗೆ ಹೆಚ್ಚಿನ ಗಮನ ಕೊಡುವಂತೆ ರೈತರಿಗೆ ಸಲಹೆ ನೀಡಿದರು.
ಕಡಲೆ ಬೆಳೆಯು ಶೇಕಡ 50ರಷ್ಟು ಹೂವಾಡುವ ಸಂದರ್ಭದಲ್ಲಿ ಚಿಕ್ ಪಿ ಮ್ಯಾಜಿಕ್ ಸಿಂಪರಣೆಯಿಂದ ಕಾಯಿಗಳ ಗಾತ್ರ ಹೆಚ್ಚಾಗಲಿದ್ದು, ಮೋಹಕ ಬಲೆಗಳ ಅಳವಡಿಕೆಯಿಂದ ಸಿಂಪರಣೆಯ ಖರ್ಚು ಕಡಿಮೆಯಾಗಿದೆ ಎಂದು ಪ್ರಗತಿಪರ ರೈತರಾದ ಸೋಮನಗೌಡ ಅಭಿಪ್ರಾಯಪಟ್ಟರು.
ಸಸ್ಯ ಸಂರಕ್ಷಣಾ ತಜ್ಞರಾದ ಡಾ. ಟಿ.ಜಿ. ಅವಿನಾಶ್ ಮಾತನಾಡಿ, ಕಾಯಿ ಕೊರಕದ ನಿರ್ವಹಣೆಗಾಗಿ emmacatin ಬೆಂಜೋಟೆ @ 0.5 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು ಎಂದರು
ಕಾರ್ಯಕ್ರಮದಲ್ಲಿ ವಿಸ್ತರಣೆ ತಜ್ಞರಾದ ರಘು ರಾಜ, ಪ್ರಗತಿಪರ ರೈತರಾದ ಸೋಮಣ್ಣಗೌಡ, ಮಂಜು ನಾಥ್, ನಾಗರಾಜ್ ಇತರರು ಭಾಗವಹಿಸಿದ್ದರು.