ಹೊನ್ನಾಳಿ,ಮಾ.24- ತಾಲ್ಲೂಕಿನ ಹತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿ.ಎಂ. ಮೇಘರಾಜ ಅವಿರೋಧವಾಗಿ ಆಯ್ಕೆಯಾದರು. ನಿಕಟ ಪೂರ್ವ ಅಧ್ಯಕ್ಷರಾಗಿದ್ದ ಮಹೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿ.ಎಂ. ಮೇಘರಾಜ ಅವರು ಒಬ್ಬರೇ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳಾದ ಮೃತ್ಯುಂಜಯಸ್ವಾಮಿ ಅವರ ಆಯ್ಕೆಯನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ರೂಪಾ ಚನ್ನೇಶ್, ಮಾಜಿ ಅಧ್ಯಕ್ಷರಾದ ಹನುಮಂತಪ್ಪ ಮಾರಿಕೊಪ್ಪ, ಸದಸ್ಯರಾದ ಸಿದ್ದಪ್ಪ, ಮಹೇಂದ್ರ, ಗಿರಿಜಮ್ಮ, ಈರಮ್ಮ, ಸಾವಿತ್ರಮ್ಮ ಇತರರು ಉಪಸ್ಥಿತರಿದ್ದರು.
January 13, 2025