ಹೊನ್ನಾಳಿ, ಫೆ. 28- ರಾಜ್ಯ ಸರ್ಕಾರಿ ನೌಕರರ ವೇತನ, ಭತ್ಯೆಗಳ ಪರಿಷ್ಕರಣೆ, ಹಳೆ ಪಿಂಚಣಿ ಯೋಜನೆ ಜಾರಿಗೆ ಸಂಬಂಧಪಟ್ಟ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರಾಜ್ಯ ಸಂಘದ ಕರೆಯ ಮೇರೆಗೆ ಮಾರ್ಚ್ 1ರಿಂದ ಎಲ್ಲಾ ಸರ್ಕಾರಿ ನೌಕರರು ಕೆಲಸಕ್ಕೆ ಗೈರು ಹಾಜರಾಗಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಕುಮಾರ್ ತಿಳಿಸಿದರು.
ಅವರು ಸರ್ಕಾರಿ ನೌಕರರ ಭವನದಲ್ಲಿ ವಿವಿಧ ಸರ್ಕಾರಿ ಸಂಘಗಳ ಜಂಟಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದರು.ಪಿಡಿಒ ಸಂಘದ ಅಧ್ಯಕ್ಷ ಅರುಣ್, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷ ಪ್ರಕಾಶ್ ನಾಯ್ಕ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಮುರುಗೇಶಪ್ಪ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಎಚ್.ಬಿ.ರವಿ, ಖಜಾಂಚಿ ಮಹೇಂದ್ರ, ಪ್ರೌ.ಶಾ.ಶಿ.ಸಂಘದ ಅಧ್ಯಕ್ಷ ರವಿಗೌಡ್ರು, ಪ್ರೌ.ಶಾ.ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಡಿ.ಜಿ.ರಂಗನಾಥ್, ಶಿಕ್ಷಣ ಇಲಾಖೆಯ ಎನ್.ಎಂ. ದೀಪಕ್, ಆರೋಗ್ಯ ಇಲಾಖೆಯ ಪ್ರಕಾಶ್, ಕುಮಾರ್ ನಾಯ್ಕ್, ರಫೀಕ್ ಮುಂತಾದವರು ಉಪಸ್ಥಿತರಿದ್ದರು.