ಹೊನ್ನಾಳಿ, ಫೆ.21 – ದ್ವಿತೀಯ ಧರ್ಮಸ್ಥಳ ಖ್ಯಾತಿಯ, ತಾಲ್ಲೂಕಿ ನ ಸುಂಕದಕಟ್ಟೆ ಗ್ರಾಮದಲ್ಲಿನ ಮುಜ ರಾಯಿ ಇಲಾಖೆಯ `ಎ’ ಗ್ರೇಡ್ ದೇವಸ್ಥಾನ ಶ್ರೀ ಮಂಜುನಾಥ ಸ್ವಾಮಿ – ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ ಪ್ರಕ್ರಿಯೆ ಮಂಗಳವಾರ ಗ್ರಾಮಸ್ಥರು – ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.
40,88,180=00 ರೂ.ಗಳಷ್ಟು ಹಣ, ಒಂದು ಸಾವಿರ ರೂ. ಮುಖಬೆಲೆಯ ನಿಷೇಧಿತ ಒಂದು ನೋಟು, ನಾನಾ ಬೇಡಿಕೆಗಳನ್ನೊಳಗೊಂಡ ಕೈಬರಹದ ಏಳೆಂಟು ಚೀಟಿಗಳು, ಹುಂಡಿಯಲ್ಲಿ ದೊರೆತವು. ಸಂಗ್ರಹಗೊಂಡ ಹಣವನ್ನು ಹೊನ್ನಾಳಿಯ ಕೆನರಾ ಬ್ಯಾಂಕ್‍ಗೆ ಜಮಾ ಮಾಡಲಾಯಿತು.
ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಶೀಲ್ದಾರ್ ತಿರುಪತಿ ಪಾಟೀಲ್, ಉಪ ತಹಶೀಲ್ದಾರ್ ಟಿ. ಸುರೇಶ್‍ನಾಯ್ಕ, ಎಸಿ ಕಚೇರಿಯ ತಹಶೀಲ್ದಾರ್ ಸೈಯ್ಯದ್ ಖಲೀಮ್ ಉಲ್ಲಾ, ಮುಜರಾಯಿ ಇಲಾಖೆಯ ವಿಷಯ ನಿರ್ವಾಹಕರಾದ ರೇಣುಕಾ ಶಿವನಗೌಡರ್, ಶ್ರೀ ಮಂಜುನಾಥ ಸ್ವಾಮಿ – ಶ್ರೀ ನರಸಿಂಹ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಸ್.ಕೆ. ನರಸಿಂಹಮೂರ್ತಿ, ಪ್ರಧಾನ ಅರ್ಚಕ ಎಸ್. ರಾಜುಸ್ವಾಮಿ, ಕೆನರಾ ಬ್ಯಾಂಕ್ ಉದ್ಯೋಗಿ ರಾಮಣ್ಣ ಇತರರು ಇದ್ದರು.