ಹೊನ್ನಾಳಿ : ಸಂಭ್ರಮದ ಮಕರ ಸಂಕ್ರಾಂತಿ

ಹೊನ್ನಾಳಿ : ಸಂಭ್ರಮದ ಮಕರ ಸಂಕ್ರಾಂತಿ

ಹೊನ್ನಾಳಿ, ಜ. 15 – ಭಾನುವಾರ ಪವಿತ್ರ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೊನ್ನಾಳಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು  ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸಿ, ನಂತರ ಹೊನ್ನಾಳಿ ಪಟ್ಟಣದ ಅತೀ ಸಮೀಪವೇ ಇರುವ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ನದಿ ದಡದಲ್ಲಿರುವ ಸೂರ್ಯ ಪುತ್ರ ಪ್ರಾಣ ದೇವರಾದ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಪೂಜೆ ಸಲ್ಲಿಸಿದರು.

ಪವಿತ್ರ ತುಂಗಭದ್ರಾ ನದಿ ಸೇರಿದಂತೆ, ಸೂರ್ಯ ದೇವರಿಗೆ ಬಗೆ ಬಗೆಯ ಅಡುಗೆಗಳ ನೈವೈದ್ಯ ಮಾಡಿ, ನಂತರ ಮಹಿಳೆಯರು ಮಕ್ಕಳು ಸಕುಟುಂಬ ಸಮೇತರಾಗಿ ಭಕ್ತರು ನದಿಯ ದಡದಲ್ಲಿ ಕುಳಿತು ಮನೆಯಿಂದ  ತಯಾರಿಸಿಕೊಂಡು ಬಂದಿದ್ದ ಬಗೆ ಬಗೆಯ ವಿಶೇಷ ಅಡುಗೆಗಳನ್ನು, ಜೊತೆಗೆ ಎಳ್ಳು ಬೆಲ್ಲವನ್ನು ಪರಸ್ಪರ ಹಂಚಿ ಕೊಂಡು ಶುಭ ಕೋರಿ ನದಿ ದಡದಲ್ಲಿ ಊಟ ಮಾಡುವ ಮೂಲಕ ಮಕರ ಸಂಕ್ರಾಂತಿ ಹಬ್ಬ ಆಚರಿಸಿದರು.

error: Content is protected !!