ಮಲೇಬೆನ್ನೂರಿನ ಮತಗಟ್ಟೆ ಪರಿಶೀಲನೆ

ಮಲೇಬೆನ್ನೂರಿನ ಮತಗಟ್ಟೆ ಪರಿಶೀಲನೆ

ಮಲೇಬೆನ್ನೂರು, ಏ.1- ಹರಿಹರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಉದಯಕುಮಾರ್‌ ಕುಂಬಾರ್‌ ಅವರು ಮಲೇಬೆನ್ನೂರು ಮತ್ತು ಕುಂಬಳೂರು ಗ್ರಾಮ ಮತಗಟ್ಟೆಗಳಿಗೆ ಇಂದು ಭೇಟಿ ನೀಡಿ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು. ಇದಕ್ಕೂ ಮುನ್ನ ಅವರು ಮಲೇಬೆನ್ನೂರಿನ ಪುರಸಭೆ ಕಛೇರಿಯ ಕೌನ್ಸಿಲ್‌ ಸಭಾಂಗಣದಲ್ಲಿ ಬಿಎಲ್‌ಓಗಳ ಸಭೆ ನಡೆಸಿ ವಿಧಾನಸಭಾ ಚುನಾವಣೆ ಸಂಬಂಧ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ನಿರ್ದೇಶನ ನೀಡಿದರು. ಉಪತಹಶೀಲ್ದಾರ್‌ ಆರ್‌. ರವಿ, ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್‌, ಕಂದಾಯ ನಿರೀಕ್ಷಕ ಆನಂದ್‌, ಗ್ರಾಮ ಆಡಳಿತಾಧಿಕಾರಿ ಅಣ್ಣಪ್ಪ, ಪುರಸಭೆ ಅಧಿಕಾರಿಗಳಾದ ಉಮೇಶ್‌, ದಿನಕರ್‌, ಹಾಲೇಶಪ್ಪ, ಪ್ರಭು ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!