ಮಲೇಬೆನ್ನೂರು, ಮಾ.27- ಸಮೀಪದ ಹಳ್ಳಿಹಾಳ್ ಮಟ್ಟಿ ಕ್ಯಾಂಪ್‌ನಲ್ಲಿ ಶುಕ್ರವಾರ ಶ್ರೀ ಕೋದಂಡ ರಾಮ ಸ್ವಾಮಿಯ 12ನೇ ವರ್ಷದ ಪುಷ್ಕರ ಮಹೋತ್ಸವ ನಡೆಯಿತು.
ಶ್ರೀ ಕೋದಂಡ ರಾಮ ದೇವಸ್ಥಾನದಲ್ಲಿ ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ, ಕಂಕಣಧಾರಣೆ, ಮಹಾಸಂಕಲ್ಪ ನಡೆಯಿತು. ಸೀತಾ, ರಾಮ, ಲಕ್ಷ್ಮಣ, ಆಂಜನೇಯ ಸ್ವಾಮಿಗೆ ವಿಶೇಷವಾಗಿ ಪಂಚಾಮೃತ ಪಂಚಸೂಕ್ತ ವಿಧಾನದ ಅಭಿಷೇಕ ಮಾಡಲಾಯಿತು. ಲೋಕ ಕಲ್ಯಾಣಾರ್ಥ ಸೀತಾರಾಮ ಕಲ್ಯಾಣ ಮಹೋತ್ಸವ ನಡೆ ಯಿತು. ನಂದಿತಾವರೆಯ ಬ್ರಹ್ಮಶ್ರೀ ಆಂಜನೇಯ ಶಾಸ್ತ್ರಿ ನೇತೃತ್ವದಲ್ಲಿ ಅರ್ಚಕರ ತಂಡದಿಂದ ಪೂಜೆಗಳು ನಡೆದವು.
ಮಾಜಿ ಶಾಸಕರಾದ ಬಿ.ಪಿ. ಹರೀಶ್, ಹೆಚ್.ಎಸ್. ಶಿವಶಂಕರ್, ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಎಂ ನಾಗೇಂದ್ರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ತಾ. ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹೆಚ್.ಟಿ.ಪರಮೇಶ್ವರಪ್ಪ, ನಂದಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಚ್ ವೀರನಗೌಡ ಇತರರಿದ್ದರು.