ಜಿಗಳಿಯಲ್ಲಿ 4 ಶಾಲೆಗಳು ದತ್ತು ಸ್ವೀಕಾರ

ಜಿಗಳಿಯಲ್ಲಿ 4 ಶಾಲೆಗಳು ದತ್ತು ಸ್ವೀಕಾರ

ಮಲೇಬೆನ್ನೂರು, ಮಾ. 27 – ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್ ಮತ್ತು ಕೋಶಂಟ್ ಟೆಕ್ ಪ್ರೈ .ಲಿಮಿಟೆಡ್ ಕಂಪನಿಯವರು ಹರಿಹರ ತಾಲ್ಲೂಕಿನ ಜಿಗಳಿ, ನಂದಿಗುಡಿ, ಧೂಳೆಹೊಳೆ ಮತ್ತು ಬಿಳಸನೂರು ಗ್ರಾಮದ ಸ.ಹಿ.ಪ್ರಾ. ಶಾಲೆಗಳನ್ನು 3 ವರ್ಷಗಳ ಅವಧಿಗೆ ದತ್ತು ಪಡೆದಿದ್ದಾರೆ. 

ಈ ಸಂಬಂಧವಾಗಿ ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದತ್ತು ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತಾನಾಡಿದ ಪ್ರತಿಬಿಂಬ ಟ್ರಸ್ಟ್‌ನ ಖಜಾಂಚಿ ಮಹೇಂದ್ರ ಕುಮಾರ್ ಅವರು, ನಾವು ದತ್ತು ಪಡೆದಿರುವ ನಾಲ್ಕು ಶಾಲೆಗಳಿಗೆ ಈ ದಿನ ಕ್ರೀಡಾ ಸಾಮಾಗ್ರಿಗಳ ಜೊತೆಗೆ ಡ್ರಮ್ ಸೆಟ್ ಮತ್ತು 50 ಇಂಚಿನ ಟಿ.ವಿ. ನೀಡಿದ್ದೇವೆ. ಅಲ್ಲದೇ, ಈ ಶಾಲೆಗಳಲ್ಲಿ ಅಗತ್ಯ ಇರುವ ಮತ್ತು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡಲು ನಾವು ಸಿದ್ಧರಾಗಿದ್ದೇವೆ ಎಂದರು.

ಕೋಶಂಟ್ ಟೆಕ್ ಕಂಪನಿಯ ಮುಖ್ಯಸ್ಥ ರಘುನಂದನ್ ಮಾತನಾಡಿ, ನಾವು ದತ್ತು ಪಡೆದಿರುವ 4 ಶಾಲೆಗಳ ಶಿಕ್ಷಕರು ಮಕ್ಕಳನ್ನು ಆದಷ್ಟು ಶೈಕ್ಷಣಿಕ ಪ್ರಗತಿಯತ್ತ ಕರೆದುಕೊಂಡು ಹೋಗಲು ಶ್ರಮವಹಿಸಬೇಕು ಎಂದರು.

ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾ ಟಿಸಿದ ಉಪತಹಶೀಲ್ದಾರ್ ಆರ್. ರವಿ ಮಾತನಾಡಿ, ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಲು ಶಿಕ್ಷಕರು ಒತ್ತು ನೀಡಬೇಕು ಮತ್ತು ಇಂತಹ ಸಂಸ್ಥೆಯನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕೆಂದರು.

ಹರಿಹರ ತಾಲ್ಲೂಕು ಪ್ರಾಥಾಮಿಕ ಶಾಲಾ ಶಿಕ್ಷಕರಿಂದ ಸಂಘದ ಕಾರ್ಯದರ್ಶಿ ಶರಣ್ ಕುಮಾರ ಹೆಗಡೆ ಮಾತನಾಡಿ, ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಗತ್ಯೆತೆಗಳನ್ನು ಪೂರೈಸುವ ಕೆಲಸ ಮಾಡುತ್ತಿರುವ ಎರಡೂ ಸಂಸ್ಥೆಗಳ ಸಾಮಾಜಿಕ ಕಳಕಳಿಯನ್ನು ಪ್ರಶಂಸಿದರು.

ಡಿ.ಸಿ.ಸಿ. ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಮಾತನಾಡಿ ದರು. ಎಸ್.ಡಿ.ಎಂ.ಸಿ. ಅಧ್ಯಕ್ಷ ಬಿ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಶಿಕ್ಷಕ ನಾಗೇಶ್ ಸ್ವಾಗತಿಸಿ ದರು. ಶಿಕ್ಷಕ ಲಿಂಗರಾಜ್ ನಿರೂಪಿಸಿ ದರೆ, ಶಿಕ್ಷಕ ಶ್ರೀನಿವಾಸ್ ರೆಡ್ಡಿ ವಂದಿಸಿದರು.

ಶಿಕ್ಷಣ ಇಲಾಖೆಯ ಹರೀಶ್ ನೋಟಗಾರ್, ಪ್ರತಿಬಿಂಬ ಟ್ರಸ್ಟ್‌ನ ನಾಗೇಶ್, ವಿನಯ್ ಕುಮಾರ್ ಕೋಶಂಟ್ ಸಂಸ್ಥೆಯ ಅರುಣ್ ಕುಮಾರ್, ಅಕ್ಷಯ್ ಕುಮಾರ್, ಬಿ.ಎಂ. ದೇವೇಂದ್ರಪ್ಪ ಮುಖಂಡರಾದ ಜಿ.ಎಂ. ಆನಂದಪ್ಪ ಕೆ.ಆರ್. ರಂಗಪ್ಪ, ಕೆ.ಎಸ್. ನಂದೆಪ್ಪ, ಗ್ರಾ.ಪಂ. ಸದಸ್ಯ ಡಿ.ಎಂ. ಹರೀಶ್, ಪತ್ರಕರ್ತ ಪ್ರಕಾಶ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜಿ.ಆರ್. ಚಂದ್ರಪ್ಪ, ಟಿ.ಎಸ್. ಗದಿಗೆಪ್ಪ, ಕೆ.ಎಸ್. ಮಾಲತೇಶ್, ಎಸ್‌ಡಿಎಂಸಿ ಸದಸ್ಯರಾದ ಗಂಗಾಧರ ಚಾರ್, ವಿಜಯ ಭಾಸ್ಕರ್, ಶ್ರೀಮತಿ ಪ್ರಿಯಾ ಮಧು, ಕಾಯಕದ ನಾಗರಾಜ್, ಕೆ. ಶಿವಲಿಂಗಪ್ಪ, ಅಭಿಷೇಕ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಧಾ, ಶಿಕ್ಷಕರಾದ ಮಲ್ಲಿಕಾರ್ಜುನ್, ಗುಡ್ಡಪ್ಪ, ಲೋಕೇಶ್, ಜಯಶ್ರೀ, ವೀಣಾ, ಕುಸುಮಾ ಮತ್ತಿತರರು ಭಾಗವಹಿಸಿದ್ದರು.

error: Content is protected !!