ಹರಿಹರ, ಮಾ. 15- ಇಲ್ಲಿನ ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳ ಜನನ ಪ್ರಮಾಣ, ಸತ್ತವರ ಮರಣ ಪ್ರಮಾಣ ಪತ್ರಕ್ಕಾಗಿ ಜನರು ಅಲೆದಾಡಿ ಸುಸ್ತಾಗಿದ್ದಾರೆನ್ನಲಾಗಿದೆ.
ರಾಣೇಬೆನ್ನೂರು ನಗರದ ನಿವಾಸಿ ಅಶ್ವಿನಿ ಎಂಬ ಮಹಿಳೆ, 4 ವರ್ಷದ ಹೆಣ್ಣು ಹಾಗೂ 6 ವರ್ಷದ ಗಂಡು ಮಗುವಿನೊಂದಿಗೆ ಆಸ್ಪತ್ರೆಯ ಮುಖ್ಯ ದ್ವಾರದ ಎದುರು ಮಗಳನ್ನು ಎತ್ತಿಕೊಂಡು ನಿಂತು ಮೌನವಾಗಿ ಪ್ರತಿಭಟಿಸುತ್ತಿದ್ದಳು.
ಸುದ್ದಿಗಾರರೊಂದಿಗೆ ಅಶ್ವಿನಿ ಮಾತನಾಡಿ, ಈ ಆಸ್ಪತ್ರೆಯಲ್ಲಿ ನನ್ನ 2ನೇ ಮಗು ಶೀಮಾ ಹುಟ್ಟಿ 4 ವರ್ಷ ಕಳೆದರೂ ಇಲ್ಲಿಯವರೆಗೂ ಆಸ್ಪತ್ರೆಯ ಸಿಬ್ಬಂದಿ ಮಗುವಿನ ಜನನ ಪ್ರಮಾಣ ಪತ್ರ ನೀಡಿಲ್ಲ.
ನಾವು ಬಡವರು, ಮಗುವನ್ನು ಶಾಲೆಗೆ ಕಳುಹಿಸಲು ಆರ್.ಟಿ.ಐ ನಲ್ಲಿ ಅರ್ಜಿ ಸಲ್ಲಿಸಲು ಮಗುವಿನ ಜನನ ಪ್ರಮಾಣ ಪತ್ರ ಅವಶ್ಯವಿದೆ. ಇದಕ್ಕಾಗಿ ರಾಣೇಬೆನ್ನೂರಿನಲ್ಲಿರುವ ನಮ್ಮ ಮನೆ ಯಿಂದ ಹರಿಹರದ ಈ ಆಸ್ಪತ್ರೆಗೆ ಅಲೆದಾಡಿ ಸುಸ್ತಾಗಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.