ಮಗುವಿನಲ್ಲಿರುವ ಪ್ರತಿಭೆ ಗುರುತಿಸುವ ಕೆಲಸ ಆಗಬೇಕಿದೆ

ಮಗುವಿನಲ್ಲಿರುವ ಪ್ರತಿಭೆ ಗುರುತಿಸುವ ಕೆಲಸ ಆಗಬೇಕಿದೆ

ಮಲೇಬೆನ್ನೂರಿನಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ 

ಮಲೇಬೆನ್ನೂರು, ಮಾ. 8 – ಪ್ರತಿ ಮಗುವಿನಲ್ಲೂ ಒಂದೊಂದು ಮಹತ್ತರವಾದ ಪ್ರತಿಭೆ ಅಡಕವಾಗಿರುತ್ತದೆ, ಆ ಪ್ರತಿಭೆ ಹೊರ ಹೊಮ್ಮಲು ಅವಕಾಶ ಮತ್ತು ಪರಿಸರ ಮುಖ್ಯವಾಗಿರುತ್ತದೆ ಎಂದು ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಹೇಳಿದರು. 

ಅವರು ಪಟ್ಟಣದ ಶ್ರೀ ಮತಿ ಬಸಮ್ಮ ಕೆಂಚಪ್ಪ ಮಡಿವಾಳರ ಕನ್ನಡ ಮತ್ತು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಮಾತನಾಡಿದರು.

ಇವತ್ತೀಗೆ ಬಿಡುಗಡೆಗೊಂಡು ಉತ್ತಮ ಪ್ರದರ್ಶನವಾಗುತ್ತಿರುವ “ತನುಜ” ಚಲನ ಚಿತ್ರವು ಮಕ್ಕಳ ಪ್ರತಿಭೆ ಗುರುತಿಸುವ ನೈಜ ನಿದರ್ಶನವಾಗಿದ್ದು, ಬಡಕುಟುಂಬದ ಹೆಣ್ಣು ಮಗುವು ಹೊಂದಿರುವ ಪ್ರತಿಭೆ ಗಮನಿಸಿದ ಶಿಕ್ಷಕರು , ಪೋಷಕರ, ಸಹಕಾರದಿಂದ ” ತನುಜ” ಎಂಬ ವಿದ್ಯಾರ್ಥಿನಿ ನವೋದಯ ಶಾಲೆಗೆ ಆಯ್ಕೆಯಾಗಿ ನಂತರ ಮೆಡಿಕಲ್ ಸೀಟ್ ಪಡೆದ ರೀತಿ ಕುರಿತಾದ ಆ ಚಲನ ಚಿತ್ರವನ್ನು ಪ್ರತಿಯೊಬ್ಬರು ನೋಡಬೇಕೆಂದು ಚಂದ್ರಶೇಖರ್ ಪೂಜಾರ್ ತಿಳಿಸಿದರು.

ತಾ. ಅಕ್ಷರ ದಾಸೋಹ ಅಧಿಕಾರಿ ರಾಮಕೃಷ್ಣಪ್ಪ ಮಾತನಾಡಿ ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಒತ್ತು ನೀಡಬೇಕೆಂದರು.

ಪುರಸಭೆ ಮುಖ್ಯಾಧಿಕಾರಿ ಎ. ಸುರೇಶ್‌ ಮಾತನಾಡಿ, ಇಂದಿನ ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದ್ದು, ಶಿಕ್ಷಕರು ಈ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕೆಂದರು.   

ಬಿಇಓ ಹನುಮಂತಪ್ಪ ಸಿ.ಆರ್.ಪಿ. ನಂಜುಂಡಪ್ಪ ಮಾತನಾಡಿ ಶಿಕ್ಷಣದ ಮಹತ್ವ ತಿಳಿಸಿಕೊಟ್ಟರು.ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ವಿಜಯರಾಘವ್, ಉಪಾಧ್ಯಕ್ಷರಾದ ಬಿ. ಚಿದಾನಂದಪ್ಪ, ಕಾರ್ಯದರ್ಶಿ ಹೆಚ್.ಜಿ. ಚಂದ್ರಶೇಖರ್ ನಿರ್ದೇಶಕರಾದ ಡಾ.ಬಿ. ಚಂದ್ರಶೇಖರ್, ಹೆಚ್.ಎಸ್. ವೀರಭದ್ರಯ್ಯ, ಎಂ.ಆರ್. ಮಾದಪ್ಪ, ಎಂ.ಕೆ. ಶರೀಫ್‌ಕುಮಾರ ಮತ್ತಿತರರು ಹಾಜರಿದ್ದರು.

ಪುರಸಭೆ ಸದಸ್ಯರಾದ ಶ್ರೀ ಮತಿ ವಿಜಯಲಕ್ಷ್ಮಿ, ಕೆ.ಪಿ. ಗಂಗಾಧರ್, ಶ್ರೀ ಮತಿ ಸುಧಾ, ಪಿ.ಆರ್. ರಾಜು, ಬಿ. ಮಂಜುನಾಥ್, ಬೆಣ್ಣೆ ಹಳ್ಳಿ ಸಿದ್ದೇಶ್, ಹಾಲಿವಾಣ ಗ್ರಾ.ಪಂ. ಅಧ್ಯಕ್ಷ ಡಿ.ಡಿ. ಚಿಕ್ಕಣ್ಣ ಮತ್ತಿತರರನ್ನು ಈ ವೇಳೆ ಸನ್ಮಾನಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಸ್ವಾಗತಿಸಿದರು. 

error: Content is protected !!