ಹರಿಹರ, ಮಾ. 5 – ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ ಮಾಡಲಾಯಿತು. ಈ ವೇಳೆ ಶಾಸಕ ಎಸ್. ರಾಮಪ್ಪ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ರೇಣುಕಾಚಾರ್ಯರ ಕುರಿತು ಮಾತನಾಡಿದರು. ಈ ವೇಳೆ ತಹಶೀಲ್ದಾರ್ ಶಿಶಿಧರಯ್ಯ, ತಾಪಂ ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಸಮಾಳ ಚಂದ್ರಪ್ಪ, ಎನ್.ಇ. ಸುರೇಶ್ ಸ್ವಾಮಿ, ಬಸವರಾಜಯ್ಯ, ಕೆ.ಟಿ. ಪಂಚಾಕ್ಷರಿ, ಗುರು ಬಸವರಾಜ್, ಹಾಲಸ್ವಾಮಿ, ಜಿ.ವಿ. ಪ್ರವೀಣ್, ಕರಿಬಸಪ್ಪ ಕಂಚಿಕೇರಿ, ಸಿದ್ದಲಿಂಗ ಸ್ವಾಮಿ, ಮಂಜುನಾಥ್, ನಾಗರಾಜ್, ಶಶಿನಾಯ್ಕ್ ಮತ್ತಿತರರು ಹಾಜರಿದ್ದರು.
January 20, 2025