ಜಿಗಳಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಜಿಗಳಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಮಲೇಬೆನ್ನೂರು, ಮಾ.2- ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಏಷ್ಯಾದ ಮೊಟ್ಟ ಮೊದಲ ವಿಜ್ಞಾನಿ ಸರ್ ಸಿ.ವಿ ರಾಮನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ರಾಜ್ಯ ವಿಜ್ಞಾನ ದಿನವನ್ನಾಚರಿಸಲಾಯಿತು.

ಅಲ್ಲದೆ, ಈ ವೇಳೆ ವಿದ್ಯಾರ್ಥಿಗಳು ವಿಜ್ಞಾನದ ಆಕೃತಿಗಳಾದ ಮೆದುಳು, ಜೀವಕೋಶ, ಹೃದಯ, ಮೂತ್ರಪಿಂಡ, ನೀರಿನ ವಿದ್ಯುತ್ ವಿಭಜನೆ, ಅಮೀಬಾ ಮತ್ತು ವಿಜ್ಞಾನದ ಉಪಕರಣಗಳು, ಬೆಳಕಿನ ವರ್ಣ ವಿಭಜನೆ, ದಹನ ಕ್ರಿಯೆ ಹಾಗೂ ಮೂಲವಸ್ತುಗಳ ಸಂಕೇತಗಳು, ಮೀನಿನ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಿ ಗಮನ ಸೆಳೆದರು.

 ಶಿಕ್ಷಕರಾದ ಲೋಕೇಶ್, ಲಿಂಗರಾಜ್ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪುರಸ್ಕಾರ ಪಡೆದ ಸರ್ ಸಿ.ವಿ ರಾಮನ್ ಅವರು ಭಾರತರತ್ನ, ಶಾಂತಿ ಪ್ರಶಸ್ತಿಗಳಿಗೂ ಭಾಜನರಾಗಿದ್ದರು ಎಂದರು.

ವಿಜ್ಞಾನ, ಗಣಿತ ನಮಗೆಲ್ಲ ಬಹಳ ಮುಖ್ಯ ವಾಗಿದ್ದು, ಮೂಢನಂಬಿಕೆಯಿಂದ ಹೊರಬರಲು ವಿಜ್ಞಾನ ಪ್ರೇರಣೆಯಾಗಿದೆ ಎಂದರು.

 ಪತ್ರಕರ್ತ ಪ್ರಕಾಶ್, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುಧಾ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಬಿ.ಪ್ರಭಾಕರ್‌, ಸದಸ್ಯರಾದ ವಿಜಯ ಭಾಸ್ಕರ್‌, ಕಲ್ಲೇಶ್, ಶಿಕ್ಷಕರಾದ ನಾಗೇಶ್, ಮಲ್ಲಿಕಾರ್ಜುನ್, ಶ್ರೀನಿವಾಸ್ ರೆಡ್ಡಿ, ಗುಡ್ಡಪ್ಪ, ಜಯಶ್ರೀ,   ವೀಣಾ ಕುಸುಮಾ ಮತ್ತಿತರು ಭಾಗವಹಿಸಿದ್ದರು.

error: Content is protected !!