ಮಲೇಬೆನ್ನೂರು, ಮಾ.2- ನಂದಿಗಾವಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ನೂತನ ಮನೆ ನಿರ್ಮಿಸಿ ಚನ್ನಮ್ಮ ಎಂಬ ಬಡ ಮಹಿಳೆಗೆ ಗುರುವಾರ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಿಜಯಕುಮಾರ್ ನಾಗನಾಳ್ ಅವರು ಮನೆಯ ಬೀಗದ ಕೈ ನೀಡಿ ಶುಭ ಕೋರಿದರು.
ಈ ವೇಳೆ ಮಾತನಾಡಿದ ವಿಜಯಕುಮಾರ್ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ವಾತ್ಸಲ್ಯ ಕಾರ್ಯಕ್ರಮದ ಮೂಲಕ ಸೂರು ಇಲ್ಲದ ಬಡವರಿಗೆ ಉಚಿತವಾಗಿ ಮನೆ ನಿರ್ಮಿಸಿ ಕೊಡುತ್ತಿದ್ದಾರೆ. ನಮಗೆ ನಿವೇಶನ ಕೊಟ್ಟರೆ ಸಾಕು ಸುಮಾರು 2 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಸಿ ಕೊಡುತ್ತೇವೆ ಎಂದರು.
ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ವಲಯದ ಮೇಲ್ವಿಚಾರಕಿ ಸಂತೋಷಿನಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ರಕ್ಷಿತಾ, ಹೊಳೆಸಿರಿಗೆರೆ ವಲಯದ ಮೇಲ್ವಿಚಾರಕಿ ನಂದಾ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.