ಮಲೇಬೆನ್ನೂರಿನಲ್ಲಿ ಭಾವೈಕ್ಯತೆ ಗಂಧದ ಮೆರವಣಿಗೆ

ಮಲೇಬೆನ್ನೂರಿನಲ್ಲಿ ಭಾವೈಕ್ಯತೆ ಗಂಧದ ಮೆರವಣಿಗೆ

ಮಲೇಬೆನ್ನೂರು, ಮಾ. 1 – ಭಾವಕ್ಯತೆಯ ಸಂಕೇತವಾಗಿರುವ ಇಲ್ಲಿನ ಪ್ರಸಿದ್ಧ ಹಜರತ್ ಸೈಯದ್ ಹಬಿಬುಲ್ಲಾ ಷಾಖಾದ್ರಿ ಅವರ ಉರುಸ್ ಅಂಗವಾಗಿ ಬುಧವಾರ ಸಂಜೆ ಗಂಧದ (ಸಂದಲ್) ಮೆರವಣಿಗೆ ಸಂಭ್ರಮದಿಂದ ಜರುಗಿತು. 

ದರ್ಗಾದಿಂದಾ ಪ್ರಾರಂಭವಾದ ಮೆರವಣಿಗೆಯು ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸಿ ನಂದಿಗುಡಿ ರಸ್ತೆ ಮೂಲಕ ಪುನಃ ದರ್ಗಾಕ್ಕೆ ಬಂದು ಮುಕ್ತಾಯ ಗೊಂಡಿತು.

ಗಂಧದ ಮೆರವಣಿಗೆ ವೇಳೆ ಹಿಂದೂ-ಮುಸ್ಲಿಂ ಬಾಂಧವರು ಗಂಧಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಮಾರಸ್ಯ ಮೆರೆದರು. ಕುದುರೆ ಕುಣಿತ, ಫಕೀರ ಸ್ವಾಮಿಗಳ ಪವಾಡಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಎ.ಎಸ್ಪಿ. ಕನ್ನೀಕಾ ಸಕ್ರಿವಾಲ್, ಸಿಪಿಐ ಗೌಡಪ್ಪಗೌಡ, ಪಿಎಸ್‌ಐ. ಪ್ರಭು ಕೆಳಗಿನ ಮನೆ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಉರುಸ್ ಕಮಿಟಿ ಅಧ್ಯಕ್ಷ ಎಂ.ಬಿ ಖುರ್ಬಾನ್ ಅಲಿ ಮತ್ತು ಪದಾಧಿಕಾರಿಗಳು ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಉರುಸ್ : ಗುರುವಾರ ಇಡೀ ದಿನ ದರ್ಗಾದಲ್ಲಿ ಉರುಸ್ ನಡೆಯಲಿದ್ದು ರಾತ್ರಿ 9 ಗಂಟೆಯಿಂದ ಪ್ರಸಿದ್ಧ ಖವ್ವಾಲರಿಂದ ಖವ್ವಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.     

error: Content is protected !!