ಹರಿಹರ, ಫೆ,28- ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಕರವೇ 25ರ ಬೆಳ್ಳಿ ಹಬ್ಬದ ಆಚರಣೆಯನ್ನು ಮಾರ್ಚ್ 1 ರ ಬುಧವಾರ ಅದ್ದೂರಿಯಾಗಿ ನಡೆಸಲಾಗುತ್ತದೆ ಎಂದು ತಾಲ್ಲೂಕು ಕರವೇ ಅಧ್ಯಕ್ಷ ಹೆಚ್. ರಾಜೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಗರದ ಹವಳದ ಬೀದಿಯಲ್ಲಿ ಬೆಳಗ್ಗೆ 9 ಗಂಟೆಗೆ ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಧ್ವಜಾರೋಹಣವನ್ನು ನಗರ ಠಾಣೆ ಸಿಪಿಐ ದೇವಾನಂದ ಮಾಡಲಿದ್ದಾರೆ.
ಸಂಜೆ 5-30 ಗಂಟೆಗೆ ದೇವಸ್ಥಾನ ರಸ್ತೆಯಲ್ಲಿ ರಸಮಂಜರಿ ಕಾರ್ಯಕ್ರಮ, ಕಾರ್ಯಕ್ರಮದ ಉದ್ಘಾಟನೆಯನ್ನು ಕರವೇ ಜಿಲ್ಲಾ ಅಧ್ಯಕ್ಷ ಎಂ.ಎಸ್. ರಾಮೇಗೌಡರು ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಡಾ ಎಸ್.ಹೆಚ್. ಪ್ಯಾಟಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಹೆಚ್.ಎಸ್. ಶಿವಶಂಕರ್, ಜಿಪಂ ಮಾಜಿ ಅಧ್ಯಕ್ಷ ಎ.ಗೋವಿಂದ ರಡ್ಡಿ, ತಹಶೀಲ್ದಾರ್ ಪೃಥ್ವಿ ಸಾನಿಕಂ, ನಗರಸಭೆ ಅಧ್ಯಕ್ಷೆ ಶಾಹೀನಾಬಾನು ದಾದಾಪೀರ್, ಉಪಾಧ್ಯಕ್ಷ ಎ ವಾಮನಮೂರ್ತಿ, ಪೌರಾಯುಕ್ತ ಐಗೂರು ಬಸವರಾಜ್, ಎಂ. ನಾಗೇಂದ್ರಪ್ಪ, ಚಂದ್ರಶೇಖರ್ ಪೂಜಾರ್, ದೀಟೂರು ಮಹೇಶ್ವರಪ್ಪ , ನಂದಿಗಾವಿ ಶ್ರೀನಿವಾಸ್ ದೇವೇಂದ್ರಪ್ಪ ಕುಣೆಬೆಳಕೇರಿ, ವಿಶೇಷ ಆಹ್ವಾನಿತರಾಗಿ ಕೃಷ್ಣ ಸಾ ಭೂತೆ, ಡಿ ಹೇಮಂತರಾಜ್, ಡಿ.ಜಿ. ರಘುನಾಥ್, ಎಂ.ಬಿ.ಅಣ್ಣಪ್ಪ, ಸಿ.ಎನ್. ಹುಲುಗೇಶ್, ಬಿ. ರೇವಣಸಿದ್ದಪ್ಪ, ಶಂಕರ್ ಖಟಾವ್ಕರ್, ಡಾ ನಬೀ, ಡಾ ಸವಿತಾ ಸೇರಿದಂತೆ ಹಲವರು ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಾರೆ.
ಈ ಸಂದರ್ಭದಲ್ಲಿ ಕರವೇ ಗೌರವಾಧ್ಯಕ್ಷ ಬಿ. ಮುಗ್ದುಮ್, ಉಪಾಧ್ಯಕ್ಷ ಎಸ್ ರುದ್ರಗೌಡ್ರು, ಕೆ ಅಮಾನುಲ್ಲಾ, ಮಹಿಳಾ ಘಟಕದ ಗೌರವಾಧ್ಯಕ್ಷೆ ರೋಹಿಣಿ ಕುಲಕರ್ಣಿ, ಅಧ್ಯಕ್ಷೆ ಎ.ಟಿ. ನೇತ್ರಾವತಿ, ಉಪಾಧ್ಯಕ್ಷರಾದ ನಾಗಮ್ಮ ಪಿ. ಮಾಲಾ ಕನಬರ್ಕರ್ ಇತರರು ಹಾಜರಿದ್ದರು.