ಜಿ. ಬೇವಿನಹಳ್ಳಿಯಲ್ಲಿ ಕಣ್ಣಿನ ತಪಾಸಣಾ ಶಿಬಿರ

ಜಿ. ಬೇವಿನಹಳ್ಳಿಯಲ್ಲಿ ಕಣ್ಣಿನ ತಪಾಸಣಾ ಶಿಬಿರ

ಮಲೇಬೆನ್ನೂರು, ಫೆ. 22- ಜಿ. ಬೇವಿನಹಳ್ಳಿ ಗ್ರಾಮದ ಶ್ರೀ ಮಂಜುನಾಥ ದೇವಸ್ಥಾನದ ಬಳಿ ದೃಷ್ಟಿ ಕಣ್ಣಿನ ಆಸ್ಪತ್ರೆ, ಚಿತ್ರದುರ್ಗ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಗಳಿ ವಲಯದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಉದ್ಘಾಟಿಸಿದರು.

ಶಿಬಿರದಲ್ಲಿ 180 ಜನರು ತಪಾಸಣೆಗೆ ಒಳಗಾಗಿದ್ದು, 137 ಜನರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. 9 ಜನರನ್ನು ಉಚಿತ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿ ತೆಂದು ಶಿಬಿರದ ನಂತರ ಧರ್ಮಸ್ಥಳ ಯೋಜನೆಯ ಜಿಗಳಿ ವಲಯದ ಮೇಲ್ವಿಚಾರಕಿ ಶ್ರೀಮತಿ  ಪದ್ಮಾವತಿ ತಿಳಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ. ಮಹೇಶ್ವರಪ್ಪ, ಶ್ರೀಮತಿ ಆಶಾ ಅಣ್ಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷೆ ಶ್ರೀಮತಿ ಶಾಂತಮ್ಮ ಸುರೇಶ್, ಚಿತ್ರದುರ್ಗ ದೃಷ್ಟಿ ಕಣ್ಣಿನ ಆಸ್ಪತ್ರೆಯ ವ್ಯವಸ್ಥಾಪಕ  ಸಂದೀಪ್ ಐತಾಳ್, ಕ್ಯಾಂಪ್ ಆಯೋಜಕರಾದ ಶಂಕರ ಗೌಡ, ನೇತ್ರಾಧಿಕಾರಿಗಳಾದ ಹನುಮಂತ ನಾಯ್ಕ, ಎಸ್. ಹರ್ಷವರ್ಧನ್, ರಾಘವೇಂದ್ರ ಕೆ.ಪಿ., ದಿಲೀಪ್ ಎಲ್., ಪ್ರಹ್ಲಾದ್, ಧರ್ಮಸ್ಥಳ ಯೋಜನೆಯ ಸೇವಾ ಪ್ರತಿನಿಧಿಗಳಾದ  ಸವಿತ, ನಾಗಮ್ಮ ಮತ್ತಿತರರು  ಭಾಗವಹಿಸಿದ್ದರು. 

error: Content is protected !!