ಅಭ್ಯರ್ಥಿ ಗೆಲುವಿಗೆ ಬಾಳೆಹಣ್ಣಿನ ಭಕ್ತಿ ಸಮರ್ಪಣೆ

ಅಭ್ಯರ್ಥಿ ಗೆಲುವಿಗೆ ಬಾಳೆಹಣ್ಣಿನ ಭಕ್ತಿ ಸಮರ್ಪಣೆ

ಹರಿಹರ, ಫೆ. 22 – ನಗರದಲ್ಲಿ ನಡೆದ ಹರಿಹರೇಶ್ವರ ರಥೋತ್ಸವದ ಸಂದರ್ಭದಲ್ಲಿ ಮುಂದಿನ ಚುನಾವಣೆಗೆ ಸಂಬಂಧಿಸಿದಂತೆ ದೇವರಿಗೆ ಪ್ರಾರ್ಥಿಸಿ ಬಾಳೆ ಹಣ್ಣನ್ನು ಸಮರ್ಪಿಸಿದ್ದಾರೆ.

ರಥೋತ್ಸವ ನಡೆಯುವ ಸಮಯದಲ್ಲಿ ಭಕ್ತರು ದೇವರಿಗೆ ಬಾಳೆಹಣ್ಣು, ತೆಂಗಿನಕಾಯಿ, ಉತ್ತುತ್ತಿ , ಕಲ್ಲುಸಕ್ಕರೆ ಬಾದಮಿ, ಗೋಡಂಬಿ, ದ್ರಾಕ್ಷಿ ಇವುಗಳನ್ನು ರಥೋತ್ಸವ ನಡೆಯುವ ಸಮಯದಲ್ಲಿ ತೇರಿಗೆ ಹಾಕುವ ಮೂಲಕ ಭಕ್ತಿಯನ್ನು ಸಮರ್ಪಿಸಲಾಗುತ್ತದೆ. ತಮಗಾಗಿ ಹಾಗೂ ಕುಟುಂಬದ ವರಿಗಾಗಿ ಬೇಡಿಕೊಳ್ಳುವುದು ಸಾಮಾನ್ಯ. ಈಗಿನ ಚುನಾವಣಾ ಪರಿಸ್ಥಿತಿಯಲ್ಲಿ ಪಕ್ಷ ಹಾಗೂ ಅಭ್ಯರ್ಥಿಗಳ ಗೆಲುವಿಗಾಗಿ ಭಕ್ತಿ ಸಮರ್ಪಣೆ ಮಾಡಲಾಗಿದೆ. ಬಾಳೆಹಣ್ಣಿನಲ್ಲಿ ಅಭ್ಯರ್ಥಿಯ ಹೆಸರು ಬರೆದು ರಥೋತ್ಸವಕ್ಕೆ ಸಮರ್ಪಿಸಲಾಗಿದೆ.

ಶ್ರೀ ಹರಿಹರೇಶ್ವರ ರಥೋತ್ಸವ ಸಮಯದಲ್ಲಿ ಜೆಡಿಎಸ್ ಪಕ್ಷದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಬಿಜೆಪಿ ಮಾಜಿ ಶಾಸಕ ಬಿ.ಪಿ. ಹರೀಶ್ ಮತ್ತು ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಕಾಂಗ್ರೆಸ್ ಪಕ್ಷದ ನಂದಿಗಾವಿ ಶ್ರೀನಿವಾಸ್, ನಾಗೇಂದ್ರಪ್ಪ ವಕೀಲರು ಇವರ ಹೆಸರನ್ನು ಬಾಳೆಹಣ್ಣಿನ ಮೇಲೆ ಹೆಸರನ್ನು ಬರೆದು ಹಾಕಿದ್ದು ಕಂಡು ಬಂದಿದೆ.

ಹರಕೆಯನ್ನು ದೇವರು ಈಡೇರಿಸುವುದಾಗಿ ಬಲವಾದ ನಂಬಿಕೆಯನ್ನು ಹೊಂದಿದ್ದೇವೆ. ರಥೋತ್ಸವ ನಡೆಯುವ ಸಮಯದಲ್ಲಿ ಕ್ಷೇತ್ರದ ಶಾಸಕರ ಆಯ್ಕೆಗಾಗಿ ದೇವರಿಗೆ ನಮಿಸುತ್ತಾ ಬಾಳೆಹಣ್ಣನ್ನು ರಥದ ತೆರಿನ ಮೇಲೆ ಹಾಕಲಾಗಿದೆ ಎಂದು ದೀಟೂರು ನಿರಂಜನ ತಿಳಿಸಿದರು.

error: Content is protected !!