ಹರಿಹರ : ದರ್ಗಾದಿಂದ ಉರುಸ್ ಮೆರವಣಿಗೆ

ಹರಿಹರ : ದರ್ಗಾದಿಂದ ಉರುಸ್ ಮೆರವಣಿಗೆ

ಹರಿಹರ, ಫೆ. 22 – ನಗರದ ಹಜರತ್ ಸೈಯದ್ ನಾಡ್ ಬಂದ್ ಷಾವಲಿ ದರ್ಗಾದ ಉರುಸ್ ನಿಮಿತ್ತವಾಗಿ ಸಂದಲ್ ಗಂಧದ ಫಕ್ಕೀರ್ ದರ್ವೇಷ್  ಭಕ್ತಾದಿಗಳಿಂದ ಮೆರವಣಿಗೆ ನೆರವೇರಿತು.

ಮೆರವಣಿಗೆ ಹಜರತ್ ಸೈಯದ್ ನಾಡ್ ಬಂದ್ ಷಾವಲಿ ದರ್ಗಾದಿಂದ ಮಧ್ಯಾಹ್ನ 2 ಗಂಟೆಗೆ ಪ್ರಾರಂಭಗೊಂಡು ‌ಹಳೆ ಪಿ.ಬಿ. ರಸ್ತೆ. ಗಾಂಧಿನಗರ, ಹರಪನಹಳ್ಳಿ ರಸ್ತೆ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಹಳ್ಳದಕೇರಿ ತಹಶೀಲ್ದಾರ್ ರಸ್ತೆ, ಶಿಬಾರ ಸರ್ಕಲ್‌ನಲ್ಲಿ ಸಂಚರಿಸಿ ಪುನಃ ದರ್ಗಾಕ್ಕೆ ರಾತ್ರಿ 8 ಗಂಟೆಗೆ ತಲುಪಿದ ನಂತರ ಉರುಸೆ ಷರೀಫ್ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ದರ್ಗಾ ಸಮಿತಿಯ ಗೌರವಾಧ್ಯಕ್ಷ ನೂರು ಆಹ್ಮದ್ ಸಾಬ್, ಉತ್ಸವ ಸಮಿತಿಯ ಅಧ್ಯಕ್ಷ ಆಸೀಫ್ ಜುನೆದಿ, ಆಸೀಫ್ ಅಲಿ , ಹಸೀನ್ ಸಾಬ್, ಜಮಲ್ ಖಾನ್, ಮುಸ್ತಾಫ್,ಷಾಹಬುದ್ದಿನ್, ಅಲ್ಲಾಭಕ್ಷ, ರೆಹೆಮಾನ್, ಶಬ್ಬೀರ್, ಜಾವೇದ್, ಸೈಪುಲ್, ಮಹಮ್ಮದ್ ಗೌಸ್ ಮತ್ತಿತತರು ಹಾಜರಿದ್ದರು.

error: Content is protected !!