ಮಲೇಬೆನ್ನೂರು, ಫೆ. 19- ಕುಂಬಳೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶಾರದಾ ಪೂಜೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಶಿವರಾಜ್ ಅವರು ಪಾಲ್ಗೊಂಡಿದ್ದರು.
ಕಾಲೇಜಿನ ಪ್ರಾಂಶುಪಾಲ ಆರ್.ರಂಗನಾಥ್, ಸಿಬಿಸಿ ಉಪಾಧ್ಯಕ್ಷ ವೈ. ಶ್ರೀನಿವಾಸಮೂರ್ತಿ, ಸದಸ್ಯ ಹೆಚ್.ಎಂ.ಸದಾನಂದ, ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಎಂ.ಹೆಚ್.ಪರಮೇಶ್ವರಪ್ಪ ಸೇರಿದಂತೆ ಇತರರು ಹಾಜರಿದ್ದರು.