ಮಲೇಬೆನ್ನೂರು, ಫೆ. 16- ಹಾಲಿವಾಣ ಗ್ರಾಮದಲ್ಲಿ ಗ್ರಾ.ಪಂ. ವತಿಯಿಂದ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕವನ್ನು ಶಾಸಕ ಎಸ್. ರಾಮಪ್ಪ ಅವರು ಮಂಗಳವಾರ ಉದ್ಘಾಟಿಸಿದರು. ನಂತರ ಜನರಿಗೆ ಕಸ ಸಂಗ್ರಹಣಾ ಬಕೆಟ್‌ಗಳನ್ನು ವಿತರಿಸಲಾಯಿತು.
ಗ್ರಾ.ಪಂ. ಅಧ್ಯಕ್ಷ ಮಡಿವಾಳರ ಬಸವರಾಜ್, ಉಪಾಧ್ಯಕ್ಷೆ ಅಂಜಿತ ಸಂತೋಷ್‌ಕುಮಾರ್, ಸದಸ್ಯರಾದ ಲಕ್ಷ್ಮಿದೇವಿ ಮಂಜಪ್ಪ, ದೀಪರಾಜು, ಎಸ್.ಇ. ಹಾಲೇಶ್, ಲಲಿತಮ್ಮ ವಿಜಯಕುಮಾರ್, ಪಿ.ಕೆ. ಮೋಹನ್, ವಿಶಾಲಮ್ಮ ನಾಗರಾಜಪ್ಪ, ಜಿ.ಎಸ್. ಹನುಮಂತಪ್ಪ, ರೇಣುಕಮ್ಮ ವಿಜಯಕುಮಾರ್, ಕಮಲಾಬಾಯಿ ಪರಮೇಶ್ವರನಾಯ್ಕ, ನೇತ್ರಾವತಿ ಹನುಮಂತಪ್ಪ, ಕೆ.ಹೆಚ್. ಚಂದ್ರಪ್ಪ, ದಿಬ್ದಳ್ಳಿ ಓಂಕಾರಪ್ಪ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಮುಖಂಡರಾದ ಎಸ್.ಜಿ. ಹಾಲೇಶಪ್ಪ, ಎಸ್.ಜಿ. ಸಂತೋಷ, ಕುಡಪಲಿ ತಿಪ್ಪೇಶ್, ಸಣ್ಣ ಪರಮೇಶ್ವರಪ್ಪ, ಜಿ.ಕೆ. ಮಲ್ಲೇಶಪ್ಪ, ಜಿ.ಕೆ. ಸುರೇಶ್, ದಿಬ್ದಳ್ಳಿಯ ಗೌಡ್ರ ಶಿವಣ್ಣ, ಡಿ.ಜಿ. ಬಸಪ್ಪ, ಕೊಮಾರನಹಳ್ಳಿಯ ಹೋಟೆಲ್ ಪರಮೇಶ್ವರಪ್ಪ, ಎಸ್. ರಂಗನಾಥ್, ವೈ. ಮಂಜಪ್ಪ, ಗ್ರಾ.ಪಂ. ಪಿಡಿಓ ಶ್ರೀನಿವಾಸ್, ಕಾರ್ಯ ದರ್ಶಿ ರೇಣುಕಾ ಮತ್ತಿತರರು ಭಾಗವಹಿಸಿದ್ದರು.
ತಾ.ಪಂ. ಇಓ ಗಂಗಾಧರನ್ ಪ್ರಾಸ್ತಾವಿಕವಾಗಿ ಮಾತನಾಡಿದರು.