ಮಲೇಬೆನ್ನೂರು, ಫೆ.12- ದೇವರಬೆಳಕೆರೆ ಗ್ರಾಮದ ಆರಾಧ್ಯದೈವ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಭಾನುವಾರ ಸಾಯಂಕಾಲ ನಡೆದ ಶಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ಎಲ್ಲರ ಗಮನ ಸೆಳೆದವು. ಎದೆ ಜಲ್ ಎನ್ನುವ ಈ ಪವಾಡಗಳನ್ನು ನೋಡಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಗೊರವಪ್ಪ ಅವರುಗಳ ತ್ರಿಶೂಲವನ್ನು ಕಾಲಿಗೆ, ಕೈಗೆ ಹಾಯಿಸುವ ದೃಶ್ಯ ಮೈ ಜುಮ್ ಎನ್ನಿಸಿತು. ಸಂಜೆ ಓಕಳಿಯೊಂದಿಗೆ ರಥೋತ್ಸವಕ್ಕೆ ತೆರೆ ಎಳೆಯಲಾಯಿತು.
January 19, 2025