ಅತ್ತಿಕಟ್ಟೆಯಲ್ಲಿಂದು ಮಹಿಳಾ ಸಮಾವೇಶ, ಕೃಷಿ ಮೇಳ

ಅತ್ತಿಕಟ್ಟೆಯಲ್ಲಿಂದು ಮಹಿಳಾ ಸಮಾವೇಶ, ಕೃಷಿ ಮೇಳ

ಮಲೇಬೆನ್ನೂರು, ಫೆ. 8 – ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಹಾವೇರಿ ಜಿಲ್ಲೆಯ ಅತ್ತಿಕಟ್ಟೆಯಲ್ಲಿ ನಾಳೆ ದಿನಾಂಕ 9 ಮತ್ತು 10 ರಂದು ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶ ಹಾಗೂ ಕೃಷಿಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ನಾಗಯ್ಯ ತಿಳಿಸಿದರು.

ಪಟ್ಟಣದ ಶ್ರೀ ನಂದಿ ಸೌಹಾರ್ದ ಸಹಕಾರಿ ಕಛೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಆಸಕ್ತಿ ವಹಿಸಿ 2020ರಲ್ಲಿ ಪ್ರಾರಂಭಿಸಿದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕೇವಲ 2 ವರ್ಷಗಳಲ್ಲಿ 9 ಜಿಲ್ಲೆಗಳಲ್ಲಿ ಸುಮಾರು 2 ಸಾವಿರ ಮಹಿಳಾ ಸ್ವ-ಸಹಾಯ ಸಂಘಗಳನ್ನು ಹೊಂದಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿಯಲ್ಲೇ ನಮ್ಮ ಸಂಸ್ಥೆಯ ಕಾರ್ಯ ನಿರ್ವಾಹಿಸುತ್ತಿದ್ದು, ಒಂದು ಊರಿಗೆ ಒಂದೇ ಸಂಘವನ್ನು ರಚಿಸಿ ಆ ಸಂಘಕ್ಕೆ ಪ್ರೋತ್ಸಾಹ ಧನವಾಗಿ 10 ಸಾವಿರ ರೂ. ನೀಡಲಾಗುವುದು.

10ರ ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕ ಸಚಿವರು, ಸಂಸದರು, ಶಾಸಕರು, ಪೂಜ್ಯರು ಭಾಗವಹಿಸಲಿದ್ದಾರೆ ಎಂದು ನಾಗಯ್ಯ ಹೇಳಿದರು. 

ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿಗಳಿ ಇಂದುಧರ್‌ ಮಾತನಾಡಿ, ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ನಮ್ಮ ಸಹಕಾರಿಯಲ್ಲಿ ಖಾತೆ ತೆರೆದರೆ ಅಗತ್ಯ ಸಾಲ ಸೌಲಭ್ಯ ನೀಡುವುದಾಗಿ ಹೇಳಿದರು. 

ಸಹಕಾರಿ ನಿರ್ದೇಶಕರೂ ಆದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮಹಿಳಾ ಸ್ವ-ಸಹಾಯ ಸಂಘದ ಸದಸ್ಯೆ ಶ್ರೀಮತಿ ಶೋಭಾ ಪಾಲಾಕ್ಷಪ್ಪ ಮಾತನಾಡಿ, ಇಲ್ಲಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಿದ್ದು, ಸ್ವ-ಉದ್ಯೋಗ ತರಬೇತಿ ಹಾಗೂ ಗೃಹ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟಕ್ಕೆ ಅವಕಾಶ ಇದೆ ಎಂದರು.

ಸಹಕಾರಿ ನಿರ್ದೇಶಕ ಹಳ್ಳಿಹಾಳ್ ಗ್ರಾಮದ ಹೆಚ್‌.ಟಿ ಶಾಂತನಗೌಡ, ಹೆಚ್‌.ಟಿ. ಪರಮೇಶ್ವರಪ್ಪ, ಸಂತೋಷ್‌ ಪಿ.ಪಾಳ್ಯದ, ಸಹಕಾರಿ ಸಿಇಓ ಬಸವರಾಜಪ್ಪ ವಕೀಲರಾದ ನಂದಿತಾವರೆ ತಿಮ್ಮನಗೌಡ, ಜಿ.ಬೇವಿನಹಳ್ಳಿ ತಿಮ್ಮನಗೌಡ ಸುದ್ಧಿಗೋಷ್ಠಿಯಲ್ಲಿದ್ದರು.

error: Content is protected !!