ಮಲೇಬೆನ್ನೂರು ಫೆ. 6 – ಪಟ್ಟಣದಲ್ಲಿ ಎಎಪಿ ಪಕ್ಷದ ಕಛೇರಿ ಉದ್ಘಾಟನೆ ಹಾಗೂ ಮಲೇಬೆನ್ನೂರು ಬ್ಲಾಕ್ ಸಮಿತಿ ರಚನಾ ಕಾರ್ಯಕ್ರಮವು ಶುಕ್ರವಾರ ಸಂತೇ ಮೈದಾನದಲ್ಲಿ ಜರುಗಿತು. ಆಮ್ ಆದ್ಮಿ ಪಕ್ಷದ ಮುಖಂಡ ಹಾಗೂ ವಕೀಲರಾದ ಗಣೇಶ ಕೆ.ದುರ್ಗದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ರಾಜ್ಯದಲ್ಲಿ ಜನರು ಈ ಬಾರಿ ಎಎಪಿ ಯನ್ನು ಬೆಂಬಲಿಸುವ ತೀರ್ಮಾನ ಮಾಡಿದ್ದಾರೆ ಎಂದರು. ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಜಾಫರ್ ಮಹಮ್ಮುದಿನ್ , ರಾಜ್ಯ ಉಪಾಧ್ಯಕ್ಷ ಡಾ. ವಿಶ್ವನಾಥ್ , ಜಿಲ್ಲಾಧ್ಯಕ್ಷ ಚಂದ್ರು ಬಸವಂತಪ್ಪ , ಜಿಲ್ಲಾ ಕಾರ್ಯದರ್ಶಿ ಅರುಣ್ ಕುಮಾರ್ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್ ಕೆ ಆದಿಲ್ ಖಾನ್, ಮುಖಂಡರಾದ ಕೆ.ರವಿಂದ್ರ, ಮಾಯಕೊಂಡ ಕ್ಷೇತ್ರದ ಅಭ್ಯರ್ಥಿ ಪ್ರೊ. ಧರ್ಮ ನಾಯಕ ಹಾಗೂ ಹರಿಹರ ತಾಲ್ಲೂಕು ಸಂಚಾಲಕ ಜಿ.ಹೆಚ್ ಬಸವರಾಜ ಹಲಸಬಾಳು, ಬಿ.ಮಲ್ಲೇಶ್, ಯೂಸುಫ್, ಜಿಯಾ, ರೋಹಿತ್, ಹೋಬಳಿ ಸಂಚಾಲಕ ಆರೀಫ್ ಸೇರಿದಂತೆ, ಇನ್ನೂ ಅನೇಕರು ಭಾಗವಹಿಸಿದ್ದರು.
January 19, 2025