ನಿಟ್ಟೂರಿನಲ್ಲಿ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆ

ನಿಟ್ಟೂರಿನಲ್ಲಿ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆ

ಮಲೇಬೆನ್ನೂರು, ಫೆ. 5 – ಕುಂಬಳೂರು ಗ್ರಾ.ಪಂ. ವತಿಯಿಂದ ನಿಟ್ಟೂರು ಸಮೀಪ ಉದ್ಯೋಗ ಖಾತರಿ ಯೋಜನೆ ಮತ್ತು 15ನೇ ಹಣಕಾಸು ಯೋಜನೆ ಅಡಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣ ಘಟಕವನ್ನು ಶಾಸಕ, ಎಸ್. ರಾಮಪ್ಪ ಅವರು ಉದ್ಘಾಟಿಸಿದರು.

ಈ ವೇಳೆ ಕಸ ಸಂಗ್ರಹ ಬಕೇಟ್‌ಗಳನ್ನು ವಿತರಿಸಿ ಮಾತನಾಡಿದ ಶಾಸಕ ರಾಮಪ್ಪ ಅವರು, ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಯಾವುದೇ ಕಾಯಿಲೆಗಳು ಬರದಂತೆ ಎಚ್ಚರವಹಿಸಿ ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲೀಲಾ ಶಿವಕುಮಾರ್, ಉಪಾಧ್ಯಕ್ಷ ಎ.ಕೆ.ಹನುಮಂತಪ್ಪ, ಗ್ರಾ.ಪಂ ಸದಸ್ಯರಾದ ಎನ್‌. ಕಲ್ಲೇಶ್, ಕೆ. ನಾಗೇಂದ್ರಪ್ಪ, ಕೆ ಆನಂದಪ್ಪ, ಶ್ರೀಮತಿ ಉಮಾದೇವಿ, ಶಿವರಾಮಚಂದ್ರಪ್ಪ, ಶ್ರೀಮತಿ ಮಧು ತಿಮ್ಮಣ್ಣ, ಶ್ರೀಮತಿ ದುರುಗಮ್ಮ ಮಹೇಶಪ್ಪ, ಎಸ್.ಜಿ. ಆನಂದಪ್ಪ, ವಿನಾಯಕ ನಗರ ಕ್ಯಾಂಪಿನ ಶ್ರೀನಿವಾಸ. ನಿಟ್ಟೂರಿನ ಬಿ.ಜಿ. ಉಮಾಪತಿ, ಶ್ರೀಮತಿ ವನಿತಾ ವಿಲಾಸ್ ಗೌಡ, ಶ್ರೀಮತಿ ಲಕ್ಷ್ಮೀದೆವಿ ರಂಗನಾಥ್, ಎಸ್.ಆರ್. ಅನಂತ್‌ಕುಮಾರ್, ಚಂದ್ರಮ್ಮ, ಮಂಜಮ್ಮ, ಅಕ್ಕಮ್ಮ ತಿಪ್ಪೇಶ್, ಶ್ರೀಮತಿ ಗಾಯಿತ್ರಿ ಆಂಜನೇಯ, ಕೆ ಅಣ್ಣಪ್ಪ, ಎಸ್.ಜಿ. ಆನಂದಪ್ಪ, ಗ್ರಾಮದ ಮುಖಂಡರಾದ ಕೆ ಏಕಾಂತಪ್ಪ, ಈರುಳ್ಳಿ ಹನುಮಂತಪ್ಪ, ಎಸ್.ಜಿ. ಪ್ರಭುದೇವ್, ವಿ.ಧನಂ ಜಯ್, ಕುಂಬಳೂರಿನ ಮುಖಂಡರಾದ ಹುಲ್ಮನಿ ನಿಂಗಪ್ಪ, ಆರ್‌.ಹೆಚ್.  ಬಸವರಾಜ್, ಎಂ. ವಾಸುದೇವ್ ಮೂರ್ತಿ, ತಾ.ಪಂ. ಮಾಜಿ ಅಧ್ಯಕ್ಷ ಆದಾಪುರ ವೀರ ಭದ್ರಪ್ಪ ,ಸೇರಿದಂತೆ  ಇನ್ನೂ ಅನೇಕರು ಭಾಗವಹಿ ಸಿದ್ದರು. ತಾ.ಪಂ.ಇಓ. ಗಂಗಾಧರನ್ ಅವರು ಸ್ವಚ್ಛ ಸಂಕೀರ್ಣ ಘಟಕದ ಮಹತ್ವವನ್ನು ವಿವರಿಸಿದರು.

ಪಿ.ಡಿ.ಓ ಮೂರ್ತಿ ಸ್ವಾಗತಿಸಿದರು, ಕಾರ್ಯದರ್ಶಿ ರಾಜ್ ಕುಮಾರ್ ವಂದಿಸಿದರು. 

error: Content is protected !!