ಹರಿಹರ, ಜ. 25 – 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕ್ಷಯ ರೋಗ ಮುಕ್ತ ಭಾರತ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕಿನ ಗುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಂಡಜ್ಜಿ ವ್ಯಾಪ್ತಿಯ 40 ಕ್ಷಯ ರೋಗಿಗಳಿಗೆ ಉಚಿತವಾಗಿ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಹನಗವಾಡಿ ಇವರು ಪೌಷ್ಟಿಕಾಂಶ ಉಳ್ಳ ಆಹಾರ ಪದಾರ್ಥಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಡಾ. ಶಶಿಕಲಾ ವೈದ್ಯಾಧಿಕಾರಿಗಳು ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರ, ರಜನಿಕಾಂತ್ ನಗರಸಭಾ ಸದಸ್ಯರು, ಎಂ. ಉಮ್ಮಣ್ಣ, ಸುಧಾ ಸುಲಕೆ ಹಿರಿಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು, ತಿಪ್ಪೇಸ್ವಾಮಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ದಾದಾಪೀರ್ ಆರೋಗ್ಯ ನಿರೀಕ್ಷಣಾ ಧಿಕಾರಿಗಳು, ನಂದೀಶ್ ಜಿಲ್ಲಾ ಕ್ಷಯ ರೋಗ ಮೇಲ್ವಿಚಾರಕರು, ಮಂಜುನಾಥ ತಾಲ್ಲೂಕು ಕ್ಷಯ ರೋಗ ಮೇಲ್ವಿಚಾರಕರು ಶರೀಫ್, ಪಿಹೆಚ್‌ಸಿಒ ಸೀಮಾ, ಜಯರಾಮ್, ಗಾಯತ್ರಿ, ಕಾವ್ಯ, ದೀಟೂರು ನಿರಂಜನ್ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶಿವಮೂರ್ತಿ ಮತ್ತು ಇತರರು ಉಪಸ್ಥಿತರಿದ್ದರು.