ಹರಿಹರ : ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಸಾಮಾನ್ಯಜ್ಞಾನ ಸ್ಪರ್ಧಾತ್ಮಕ ಪರೀಕ್ಷೆ

ಹರಿಹರ : ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಸಾಮಾನ್ಯಜ್ಞಾನ ಸ್ಪರ್ಧಾತ್ಮಕ ಪರೀಕ್ಷೆ

ಹರಿಹರ, ಜ.24 – ದಲಿತ ವಿದ್ಯಾರ್ಥಿ ಪರಿಷತ್ತಿನಿಂದ ಡಾ. ಅಂಬೇಡ್ಕರ್, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಬಗ್ಗೆ ಸಾಮಾನ್ಯ ಜ್ಞಾನದ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ಏರ್ಪಡಿಸಲಾಗಿದೆ ಎಂದು ದಾವಣಗೆರೆ ಜಿಲ್ಲಾ ಸಂಚಾಲಕ ಹಾಗೂ ಮಲೇಬೆನ್ನೂರು ನಗರಸಭಾ ಸದಸ್ಯ ಸಾಬಿರ್ ಅಲಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದವರಿಗೆ 5 ಲಕ್ಷ ರೂ., ನಗದು, ದ್ವಿತೀಯ 2 ಲಕ್ಷ ರೂ. ನಗದು ಮತ್ತು ತೃತೀಯ 1 ಲಕ್ಷ ರೂ.ಗಳನ್ನು ನಗದು ಬಹುಮಾನ ನೀಡಲಾಗುವುದು. ವಿಶೇಷವಾಗಿ ಪ್ರಥಮ ಮೂರು ಸ್ಥಾನ ವಿಜೇತರಿಗೆ ಐಎಎಸ್, ಕೆಎಎಸ್ ಪರೀಕ್ಷೆಗೆ ಉಚಿತವಾಗಿ ತರಬೇತಿ ಕೊಡಿಸಲಾಗುವುದು. ಪರೀಕ್ಷೆಗೆ ಪ್ರವೇಶ ಶುಲ್ಕ 200 ರೂ.ಗಳಾಗಿರುತ್ತದೆ ಎಂದು ತಿಳಿಸಿದರು.

ಪರೀಕ್ಷೆಯಲ್ಲಿ 14 ರಿಂದ 35 ವರ್ಷದ ಒಳಗಿನವರಿಗೆ ಅವಕಾಶ ಇರುತ್ತದೆ. ಭಾಗವಹಿಸಲಿಚ್ಛಿಸುವವರು ಫೆಬ್ರವರಿ 28 ರೊಳಗಾಗಿ ಮೊಬೈಲ್ ನಂಬರ್ 9164495822, 96630 48622 ಮತ್ತು ಲಿಂಕ್ https://thedvp.org/ ಸಂಪರ್ಕಿಸಬಹುದು.

ಇದೇ ಜ. 31 ರಂದು ವಿಜಯಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಸಾಧಕರಿಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ನಮ್ಮ ದಾವಣಗೆರೆ ಜಿಲ್ಲೆಯಿಂದ ನಾಲ್ಕು ಜನ ಆಯ್ಕೆಯಾಗಿರುತ್ತಾರೆ ಎಂದು ಮಾಹಿತಿಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ಸಂಚಾಲಕ ಸಾಬೀರ್ ಅಲಿ, ಸಂಘಟನಾ ಕಾರ್ಯದರ್ಶಿ ಶಶಿ ನಾಯ್ಕ್, ಮಾಧ್ಯಮ ವಕ್ತಾರ ಶಕೀಲ್ ಅಹಮದ್, ಮಲೇಬೇನ್ನೂರು ಪುರಸಭೆ ಸದಸ್ಯ ಷಾ ಅಬ್ರಾರ್ ಅವರು ಉಪಸ್ಥಿತರಿದ್ದರು.

error: Content is protected !!