ಕ್ಷಯ ರೋಗಿಗಳಿಗೆ ನ್ಯೂಟ್ರಿಷನ್‌ ಆಹಾರ ಪದಾರ್ಥ ವಿತರಣೆ

ಕ್ಷಯ ರೋಗಿಗಳಿಗೆ ನ್ಯೂಟ್ರಿಷನ್‌ ಆಹಾರ ಪದಾರ್ಥ ವಿತರಣೆ

ಮಲೇಬೆನ್ನೂರು ಜ, 23 – 75ನೇ ಸ್ವಾತಂತ್ರ್ಯ ಅಮೃತ್ ಮಹೋತ್ಸವದ ಅಂಗವಾಗಿ ಕ್ಷಯರೋಗ ಮುಕ್ತ ಭಾರತ ಕಾರ್ಯಕ್ರಮದ ಅಡಿಯಲ್ಲಿ ಗುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಂಡಜ್ಜಿ ವ್ಯಾಪ್ತಿಯ ಕ್ಷಯ ರೋಗಿಗಳಿಗೆ  ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅವರು ಕ್ಷಯ ರೋಗಿಗಳಿಗೆ ನ್ಯೂಟ್ರಿಶನ್ ಪೌಷ್ಟಿಕಾಂಶ ಉಳ್ಳ ಆಹಾರ ಪದಾರ್ಥಗಳನ್ನು ವಿತರಿಸಿದರು.  

ಈ ವೇಳೆ ಮಾತನಾಡಿದ ಚಂದ್ರಶೇಖರ್ ಪೂಜಾರ್ ಅವರು,  ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಕ್ಷಯ ಮುಕ್ತ ಭಾರತಕ್ಕಾಗಿ ಪ್ರತಿಯೊಬ್ಬ ಕ್ಷಯ ರೋಗಿಗೆ ಉತ್ತಮ ಆರೋಗ್ಯವನ್ನು ಕಲ್ಪಿಸಬೇಕು, ರೋಗಿಗಳಿಗೆ ಆತ್ಮ ಸ್ಥೈರ್ಯ ತುಂಬಿ ಕ್ಷಯ ರೋಗವು ಒಂದು ಶಾಪವೂ ಅಲ್ಲ ಅಥವಾ ಯಾವುದೇ ದೆವ್ವ, ಭೂತ, ಪಿಶಾಚಿಗಳಿಂದ ಬಂದಿರತಕ್ಕಂತ ಕಾಯಿಲೆಯೂ ಅಲ್ಲ ಎಂಬುದನ್ನು ತಿಳಿಸೋಣ, ಇದು ಮೈಕೋ ಬ್ಯಾಕ್ಟೀರಿಯಾ ಟುಬೇರ್ಕುಲೆ ಎಂಬ ಸೂಕ್ಷ್ಮಾಣುವಿನಿಂದ ಬರುವ ಕಾಯಿಲೆಯಾಗಿದ್ದು,  ಸರಿಯಾದ ಚಿಕಿತ್ಸೆಯಿಂದ ಗುಣವಾಗುವ ಕಾಯಿಲೆ ಆಗಿರುತ್ತದೆ.  6 ತಿಂಗಳ ಕಾಲ ಆರೋಗ್ಯ ಇಲಾಖೆಯಿಂದ ಹಾಗೂ ಸರ್ಕಾರದಿಂದ ಔಷಧೋಪಚಾರ, ಪ್ರತಿ ತಿಂಗಳು 500 ರೂ.ಗಳಂತೆ ಚಿಕಿತ್ಸೆ ಮುಗಿಯುವವರೆಗೆ ಸರ್ಕಾರದಿಂದ ನೇರವಾಗಿ ಅವರ ಅಕೌಂಟಿಗೆ ಹಣ ಸಂದಾಯವಾಗುವ ಕಾರ್ಯಕ್ರಮ ನಡೆಯುತ್ತಿದೆ. ಎಲ್ಲಾ ಕ್ಷಯ ರೋಗಿಗಳು ಯಾವುದೇ ಭಯ ಭೀತರಾಗದೆ ಚಿಕಿತ್ಸೆ ಪಡೆಯಿರಿ, ನಿಮ್ಮ ಆರೋಗ್ಯವನ್ನು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಚಿಕಿತ್ಸೆ ಮುಗಿಯುವವರೆಗೆ ದತ್ತು ತೆಗೆದುಕೊಂಡು ಪೌಷ್ಟಿಕ ಪದಾರ್ಥಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.  

ಕೊಂಡಜ್ಜಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಮತಿ ಶಶಿಕಲಾ, ನಗರಸಭಾ ಸದಸ್ಯ ರಜನಿಕಾಂತ್,  ತಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಉಮ್ಮಣ್ಣ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಶ್ರೀಮತಿ ಸುಧಾ ಸುಲಕೆ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ದಾದಾಪೀರ್,  ಜಿಲ್ಲಾ ಕ್ಷಯ ರೋಗ ಮೇಲ್ವಿಚಾರಕ ನಂದೀಶ್,  ತಾ. ಕ್ಷಯ ರೋಗ ಮೇಲ್ವಿ ಚಾರಕ ಮಂಜುನಾಥ, ಆರೋಗ್ಯ ಸಿಬ್ಬಂದಿಗಳಾದ ಶರೀಫ್,  ಸೀಮಾ, ಜಯರಾಮ್, ಗಾಯತ್ರಿ, ಕಾವ್ಯ, ಯುವ ಮುಖಂಡ ದೀಟೂರು ನಿರಂಜನ್, ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ  ಶಿವಮೂರ್ತಿ ಮತ್ತು ಆಶಾ ಕಾರ್ಯಕರ್ತರು ಈ ವೇಳೆ ಹಾಜರಿದ್ದರು.

error: Content is protected !!