ಮಲೇಬೆನ್ನೂರು,ಜ. 20- ಕೋವಿಡ್ ಅವಧಿಯ ಕಲಿಕಾ ನಷ್ಟವನ್ನು ಭರ್ತಿ ಮಾಡಲು ಕಲಿಕಾ ಚೇತರಿಕೆ ಜತೆಯಲ್ಲಿ ಕಲಿಕಾ ಹಬ್ಬ ನಡೆಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ ತಿಳಿಸಿದರು.
ಅವರು ಗುರುವಾರ ಪಟ್ಟಣದ ಜಿಬಿಎಂಎಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಲೇಬೆನ್ನೂರು ಸಮೂಹ ಸಂಪನ್ಮೂಲ ವ್ಯಾಪ್ತಿಯ 13 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳ ಕಲಿಕಾ ಹಬ್ಬದಲ್ಲಿ ಭಾಗಿಯಾಗಿ ಮಾತನಾಡಿದರು. ರಾಜ್ಯದಲ್ಲಿ ಏಕಕಾಲದಲ್ಲಿ 4103 ಕ್ಲಸ್ಟರ್ ಗಳಲ್ಲಿ 45 ಸಾವಿರ ಶಾಲೆಗಳ 1 ಲಕ್ಷ ಶಿಕ್ಷಕರು, 9 ಲಕ್ಷ ವಿದ್ಯಾರ್ಥಿಗಳು ಭಾಗಿಯಾಗುವ ಕಲಿಕಾ ಹಬ್ಬ ನಡೆಯುತ್ತಿದೆ.
ಮಕ್ಕಳ ಹೊಸ ಆಲೋಚನೆಗೆ ಎರಡು ದಿನಗಳ ಕಲಿಕಾ ಹಬ್ಬವು ಓದು-ಬರಹ, ಲೆಕ್ಕವೇ ಜೀವನವಾ ಗಲು ಪ್ರೋತ್ಸಾಹವಾಗುವ ವಿಶ್ವಾಸವಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಬಿ.ಅಚ್ಯುತಾನಂದ, ಸವಿತಾ, ಪ್ರೇಮಕುಮಾರಿ, ಆಶಾ ಇವರುಗಳು ಕಾರ್ಯನಿರ್ವಹಿಸಿ ನಾಲ್ಕು ಗುಂಪುಗಳಾಗಿ ವಿಂಗಡಿಸಿ, ಮಕ್ಕಳಿಗೆ ಇಷ್ಟವಾದ ಆನಂದದ ಚಟುವಟಿಕೆ, ಆಟ, ಹಾಡು, ಸ್ಥಳದಲ್ಲಿ ಪೇಪರ್ ಕಟಿಂಗ್, ಗ್ರಾಮ ಸುತ್ತೋಣ, ಸಂದರ್ಶನಗಳನ್ನು ಮಕ್ಕಳೇ ನಡೆಸುವಲ್ಲಿ ಪ್ರೇರಣೆಯಾದರು. ಮಕ್ಕಳೇ ತಯಾರಿಸಿದ ಕಿರೀಟ, ಬ್ಯಾಡ್ಜ್‌ಗಳನ್ನು ಪೋಷಕರು, ಶಿಕ್ಷಕರು ಧರಿಸಿ ಸಂತಸಪಟ್ಟರು.
ಪುರಸಭೆ ಸದಸ್ಯ ಷಾ ಅಬ್ರಾರ್ ಕಲಿಕಾ ಹಬ್ಬ ಉದ್ಘಾಟಿಸಿದರು. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಅಜಯ್ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು.
ಎಸ್ ಡಿ ಎಂ ಸಿ ಸದಸ್ಯರಾದ ಓ ಜಿ.ಮಂಜು, ಬೀರಪ್ಪ, ಹೆಚ್.ಎಂ.ಸದಾನಂದ, ಬಿ.ಬಸವರಾಜ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ಜಗದೀಶ್ ಉಜ್ಜಮ್ಮನವರ್, ಸರ್ಕಾರಿ ಉರ್ದು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನಪ್ಪ, ಶಿಕ್ಷಕರಾದ ರೇವಣಸಿದ್ದಪ್ಪ ಅಂಗಡಿ, ಸುರೇಶ್ ಮೂಲಿಮನಿ, ರಾಮಪ್ಪ ಸೋಮಣ್ಣೇರ, ದಂಡಿ ತಿಪ್ಪೇಸ್ವಾಮಿ, ರಾಜಶೇಖರ್, ಹಾಲಪ್ಪ, ಸಿಆರ್‍ಪಿ ನಂಜುಂಡಪ್ಪ, ಹನುಮಂತಪ್ಪ, ಶಿಕ್ಷಣ ಸಂಯೋಜಕ ಹರೀಶ್ ನೋಟಗಾರ್ ಮತ್ತಿತರರು ಈ ವೇಳೆ ಹಾಜರಿದ್ದರು.