ಮಲೇಬೆನ್ನೂರು, ಜ.12- ಹರಳಹಳ್ಳಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕೆರೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪುನಶ್ಚೇತನ ಗೊಳಿಸುವ ಕಾಮಗಾರಿಗೆ ಶುಕ್ರವಾರ ಯೋಜನೆ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್ ಅವರು ಗುದ್ದಲಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಡಾ. ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ ನಮ್ಮ ಯೋಜನೆಯಿಂದ ರಾಜ್ಯದಲ್ಲಿ 427 ಕೆರೆಗಳನ್ನು
ಅಭಿವೃದ್ಧಿ ಪಡಿಸಿದ್ದು, ಇದು 428 ನೆ ಕೆರೆ ಆಗಿದೆ. ಗ್ರಾಮಕ್ಕೆ ತುಂಬಾ ಅವಶ್ಯವಾಗಿರುವ ಈ ಕೆರೆಯನ್ನು ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಸಿ, ಸ್ವಚ್ಛ ಮಾಡಿಸಿಕೊಡುತ್ತೇವೆ. ನಂತರ ಇದಕ್ಕೆ ಭದ್ರಾ ಕಾಲುವೆ ಮೂಲಕ ನೀರು ತುಂಬಿಸಲಾಗುವುದೆಂದರು.
ಮಲೇಬೆನ್ನೂರು ಯೋಜನಾ ಧಿಕಾರಿ ವಸಂತ್ ದೇವಾಡಿಗ, ಗ್ರಾ.ಪಂ. ಸದಸ್ಯರಾದ ಪಕ್ಕೀರಪ್ಪ, ಶ್ರೀಮತಿ ದೇವಿಕಾ, ಶ್ರೀಮತಿ ರೂಪಾ, ಒಕ್ಕೂಟದ ಅಧ್ಯಕ್ಷ ಆಂಜನೇಯ, ಕೆರೆ ಸಮಿತಿ ಅಧ್ಯಕ್ಷ ಮುದ್ದೇರ ಕರಿಬಸಪ್ಪ, ಉಪಾಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ವೈ.ಕರಿಬಸಪ್ಪ, ಅಣ್ಣಪ್ಪ, ರವಿಕುಮಾರ್, ಯೋಜನೆಯ ಕೃಷಿ ಅಧಿಕಾರಿ ಗಂಗಾಧರ್, ಮಲ್ಲನಾಯ್ಕನಹಳ್ಳಿ ವಲಯದ ಮೇಲ್ವಿಚಾರಕಿ ಶ್ರೀಮತಿ ಸವಿತಾ, ಸ್ಥಳೀಯ ಸೇವಾ ಪ್ರತಿನಿಧಿ ಮೈತ್ರಾ ಮತ್ತಿತರರು ಈ ವೇಳೆ ಹಾಜರಿದ್ದರು.