ಇರುವ ಅವಕಾಶಗಳನ್ನು ಗುರುತಿಸಿ, ಗುಣಾತ್ಮಕ ಬಳಕೆ ಮಾಡಿಕೊಳ್ಳುವುದೇ `ಉದ್ಯಮಶೀಲತೆ’

ಇರುವ ಅವಕಾಶಗಳನ್ನು ಗುರುತಿಸಿ, ಗುಣಾತ್ಮಕ ಬಳಕೆ ಮಾಡಿಕೊಳ್ಳುವುದೇ `ಉದ್ಯಮಶೀಲತೆ’

ಹರಿಹರ ಸ.ಕಾಲೇಜಿನ ಕಾರ್ಯಕ್ರಮದಲ್ಲಿ ಉದ್ಯಮಿ ಹೆಚ್.ಎನ್.ಬಸವರಾಜ್ ವಿಶ್ಲೇಷಣೆ

ಹರಿಹರ, ಜೂ.10- ವೃತ್ತಿಯಲ್ಲಿ ಗೌರವ ಮತ್ತು ಸಮಾಜದ ಎಲ್ಲಾ ಸ್ತರಗಳಲ್ಲೂ ಗೌರವವನ್ನು ಪಡೆದರೆ ಆ ವ್ಯಕ್ತಿ ಯಶಸ್ಸು ಸಾಧಿಸಿದ ಹಾಗೆ. ಅಲ್ಲದೇ ಉದ್ಯಮದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿ ತೃಪ್ತನಾದರೆ ಉದ್ಯಮವೂ ಯಶಸ್ಸು ಕಂಡ ಹಾಗೆ ಎಂದು ಖ್ಯಾತ ಉದ್ಯಮಿ ಹಾಗೂ ಪಿ.ಎಸ್.ಕೆ ಫಾರ್ಮಾ ಚೇರ್ಮನ್ ಹೆಚ್.ಎನ್. ಬಸವರಾಜ್  ಅಭಿಪ್ರಾಯಿಸಿ ದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎಸ್.ಸಿ ಹಾಗೂ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಸಹಯೋಗದಲ್ಲಿ ಇಂದು   ಜರುಗಿದ `ಉದ್ಯಮಶೀಲತೆ ಮತ್ತು ಉದ್ಯೋ ಗಶೀಲತೆ’ ಎಂಬ ವಿಷಯವಾಗಿ ನಡೆದ ವಿಶೇಷ   ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯಮಶೀಲತೆ ಎಂಬುದು ಇರುವ ಅವಕಾಶಗಳನ್ನು ಗುರುತಿಸಿ, ಅವುಗಳನ್ನು ಗುಣಾತ್ಮಕ ಬಳಕೆ ಮಾಡಿಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ಯುವಕರಿಗೆ ಮನವರಿಕೆ ಮಾಡಿದರು.

ಜನರೊಂದಿಗಿನ ಉತ್ತಮ ಸಂಪರ್ಕ, ಮಾರುಕಟ್ಟೆಯ ಬೇಡಿಕೆ, ಗುಣಮಟ್ಟದ ಉತ್ಪನ್ನಗಳ ಪೂರೈಕೆ ಹಾಗೂ ಕಲಿಕೆಯ ಸಮಯದ ತಪ್ಪುಗಳು ಮರುಕಳಿಸದಂತೆ ಗಮನ ವಹಿಸುವುದು   ಉದ್ಯಮಶೀಲತೆಗೆ ಇರುವ ಗಣನೀಯ ಅಂಶಗಳಾಗಿವೆ. ಯಶಸ್ಸು ಕಾಣಲು ಕಳ್ಳದಾರಿ ಅಥವಾ ಅಡ್ಡದಾರಿಗಳಿಲ್ಲ. ಪರಿಶ್ರಮ ಮತ್ತು ಆಸಕ್ತಿ ಎಂಬುದು ಯಶಸ್ಸು ಕಾಣಲು ಇರುವ ಪ್ರಮುಖ ದಾರಿಗಳು ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿ ದಾಯಕವಾಗಿ ಮನವರಿಕೆ ಮಾಡಿಕೊಟ್ಟರು.   

ಐಸಿಎಐನ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಕುಮಾರಿ ರತ್ನಕುಮಾರಿ, ಪದವಿ ನಂತರ ಉನ್ನತ ವ್ಯಾಸಂಗಕ್ಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇರುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.

ಕಾಲೇಜ್‌ನ ಪ್ರಾಂಶುಪಾಲ  ಪ್ರೊ. ಹೆಚ್.ವಿರುಪಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು.  ಐ.ಕ್ಯೂ.ಎಸ್.ಸಿ ಸಂಯೋಜಕ  ಪ್ರೊ.ಜಿ.ಎಸ್.ಸುರೇಶ್ ಮಾತ ನಾಡಿದರು.   ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಮುಖ್ಯಸ್ಥ  ಡಾ.ಕೆ.ಎ.ಬಾಬು  ಪ್ರಾಸ್ತಾವಿಕ ವಾಗಿ ಮಾತನಾಡಿದರು.  ಸಹಾಯಕ ಪ್ರಾಧ್ಯಾಪಕ ರಾದ   ಮಂಜುನಾಥ ನರಸಗೊಂಡ, ಡಾ.ದ್ರಾಕ್ಷಾಯಿಣಿ, ಲಕ್ಷ್ಮಣನಾಯ್ಕ  ಮತ್ತಿತರರು ಉಪಸ್ಥಿತರಿದ್ದರು. ಬಿ.ಕಾಂ ಪದವಿ ವಿದ್ಯಾರ್ಥಿನಿ ಕು. ಸುಮಾ ಕುಂಬಳೂರು ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ  ಡಾ.ಅನಂತನಾಗ್  ಸ್ವಾಗತಿಸಿದರು. ಅಧ್ಯಾಪಕಿ ಶ್ರೀಮತಿ ಶ್ವೇತಾ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

error: Content is protected !!