ಹರಪನಹಳ್ಳಿ,ಮಾ.27- ನ್ಯಾಯ ಮೂರ್ತಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿದ್ದಕ್ಕಾಗಿ ಪಟ್ಟಣದಲ್ಲಿ ಪರಿಶಿಷ್ಟ ಸಮುದಾಯದವರು ಮುಖ್ಯಮಂತ್ರಿ ಹಾಗೂ ಇತರರಿಗೆ ಕ್ಷೀರಾಭಿಷೇಕ ಮಾಡಿ ವಿಜಯೋತ್ಸವ ಆಚರಿಸಿದರು.
ಇಲ್ಲಿನ ಪ್ರವಾಸಿ ಮಂದಿರ ವೃತ್ತದ ಹೈಮಾಸ್ಟ್ ದೀಪದ ಕೆಳಗೆ ಡಾ. ಬಿ.ಆರ್. ಚಿತ್ರದುರ್ಗ ಮಾದಾರ ಚನ್ನಯ್ಯ ಪೀಠದ ಬಸವ ಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವ ಗೋವಿಂದ ಕಾರಜೋಳ ಅವರುಗಳ ಭಾವಚಿತ್ರಗಳನ್ನು ಅಳವಡಿಸಿ ಆ ಭಾವಚಿತ್ರಗಳಿಗೆ ಕ್ಷೀರಾಭಿಷೇಕ ಮಾಡಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ನಂತರ ಹೊಸಪೇಟೆ ರಸ್ತೆ ಮೂಲಕ ಸಾಗಿದ ಮೆರವಣಿಗೆ ಪುರಸಭೆಗೆ ತೆರಳಿ, ಪ್ರವಾಸಿ ಮಂದಿರ ವೃತ್ತಕ್ಕೆ ಡಾ.ಬಿ.ಆರ್.ಅಂಬೇ ಡ್ಕರ್‌ರವರ ಹೆಸರನ್ನು ನಾಮಕಾರಣ ಮಾಡಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಕಳೆದ 20ವರ್ಷಗಳಿಂದ ಈ ಸಂಬಂಧ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡಿಕೊಂಡು ಬಂದಿದ್ದೇವೆ. ಈವರೆಗೂ ಯಾವುದೇ ಪ್ರಕ್ರಿಯೆಗಳು ನಡೆದಿಲ್ಲ. ಅಂಬೇಡ್ಕರ್‍ರವರು ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ, ವಿಶ್ವಕ್ಕೆ ಮಾದರಿಯಾಗಿ ಸಂವಿಧಾನ ಶಿಲ್ಪಿಯಾಗಿದ್ದು, ಅಂತವರ ಹೆಸರನ್ನು ಐ.ಬಿ.ವೃತ್ತಕ್ಕೆ ನಾಮಕರಣ ಮಾಡುವುದು ಸೂಕ್ತ ಎಂದು ಮುಖಂಡ ಕಣಿವಿಹಳ್ಳಿ ಮಂಜುನಾಥ ಹೇಳಿದರು.
ಪೃಥ್ವೇಶ್ವರ ಕೆ. ಪ್ರಭು, ಹನುಮಂತಪ್ಪ, ನಾಗಪ್ಪ, ಪರಸಪ್ಪ, ಬಿ.ಚಂದ್ರಪ್ಪ, ಯು.ಚಂದ್ರಪ್ಪ, ಭಂಗಿ ರಾಮಪ್ಪ, ಹಾಲಪ್ಪ, ಪರಶುರಾಮ, ಕೆ.ಮಂಜುನಾಥ, ಸುರೇಶ್ ಹಾಗೂ ಇತರರು ಇದ್ದರು.