ಹರಪನಹಳ್ಳಿ : ಅಪ್ರಾಪ್ತ ಬಾಲಕಿ ವಿವಾಹಕ್ಕೆ ತಡೆ

ಹರಪನಹಳ್ಳಿ : ಅಪ್ರಾಪ್ತ ಬಾಲಕಿ ವಿವಾಹಕ್ಕೆ ತಡೆ

ಹರಪನಹಳ್ಳಿ, ಫೆ. 23- ತಾಲ್ಲೂಕಿನ ಅರಸೀಕೆರೆ ಗ್ರಾಮದ 6 ನೇ ವಾರ್ಡಿನ ಡಿ. ಸುರೇಶ್, ಅಂಜಿನಮ್ಮ ದಂಪತಿ ಮಗಳು ಡಿ. ಕವಿತಾ ಎಂಬ ಬಾಲಕಿಯ ವಿವಾಹವು ದಾವಣಗೆರೆ ತಾಲ್ಲೂಕಿನ ಅಣಜಿ ಗ್ರಾಮದ ತಿಪ್ಪೇಶ್ ತಂದೆ ನಿಂಗಪ್ಪ ಕಡತೇರ ಇವರ ಜೊತೆ ಇಂದು ನಡೆಸಲು  ತಯಾರಿ ನಡೆದಿತ್ತು.

ಡಿ. ಕವಿತಾಳಿಗೆ 17 ವರ್ಷ 3 ತಿಂಗಳಾಗಿದ್ದು ಇವಳಿಗೆ ಮದುವೆಯ  ವಯಸ್ಸು ಆಗದಿದ್ದರಿಂದ ವಿವಾಹನ್ನು ನಿಲ್ಲಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿಯವರ ನೇತೃತ್ವದಲ್ಲಿ  ಬುಧವಾರ ಬಾಲ್ಯ ವಿವಾಹವನ್ನು ತಡೆಯಲಾಯಿತು.

ಇದೇ ಗ್ರಾಮದ ಮಂಜಪ್ಪ, ನೀಲಪ್ಳರ ನಿರ್ಮಲ ದಂಪತಿ ಮಗಳು ಕು.  ರುಕ್ಮಿಣಿ ಎಂಬ 16 ವರ್ಷದ ಬಾಲಕಿಯನ್ನು ಹರಪನಹಳ್ಳಿ ತಾಲ್ಲೂಕಿನ ಮಾಚಿಹಳ್ಳಿ ಗ್ರಾಮದ ಪರುಸಪ್ಪ ತಂದೆ ಕೆಂಚಪ್ಪ ರೊಂದಿಗೆ ಖಾಯಂ ಮಾಡಿದ್ದು ತಿಳಿದ ಅಧಿಕಾರಿಗಳಾದ ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ರತ್ನ ದೊಡ್ಡಬೆಣ್ಣೆ, ಪೊಲೀಸ್ ಇಲಾಖೆಯ ಚಿದಾನಂದಪ್ಪ, ಗ್ರಾಮ ಪಂಚಾಯಿತಿ ಪಿ.ಡಿ.ಓ. ಅಂಜಿನಪ್ಪ ಹಾಗೂ ಅಂಗನವಾಡಿ ಕಾರ್ಯಕರ್ತೆ ದುರುಗಮ್ಮ ರವರು ಮನೆಗೆ ತೆರಳಿ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳ ಕುರಿತು ವಿಷಯ ತಿಳಿಸಿ ಬಾಲ್ಯ ವಿವಾಹ ತಡೆಯುವಲ್ಲಿ  ಯಶಸ್ವಿಯಾದರು.

error: Content is protected !!