ಅಜ್ಞಾನವನ್ನು ತೊಲಗಿಸಿ, ಸತ್ಯ ಜ್ಞಾನವನ್ನು ವಿಶ್ವಕ್ಕೆ ದಯಪಾಲಿಸಿದ ಪರಮಾತ್ಮನ ಆಗಮನವೇ ಶಿವರಾತ್ರಿ

ಅಜ್ಞಾನವನ್ನು ತೊಲಗಿಸಿ, ಸತ್ಯ ಜ್ಞಾನವನ್ನು ವಿಶ್ವಕ್ಕೆ ದಯಪಾಲಿಸಿದ ಪರಮಾತ್ಮನ ಆಗಮನವೇ ಶಿವರಾತ್ರಿ

ಹರಪನಹಳ್ಳಿ ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹರಪನಹಳ್ಳಿ, ಫೆ.19- ಅಜ್ಞಾನವೆಂಬ ಅಂಧಕಾರವನ್ನು ತೊಲಗಿಸಿ ಸತ್ಯ ಜ್ಞಾನ ಪ್ರಕಾಶವನ್ನು ವಿಶ್ವಕ್ಕೆ ದಯಪಾಲಿಸಲು ಜ್ಞಾನ ಸೂರ್ಯನಾದ ಶಿವ ಪರಮಾತ್ಮನ ಆಗಮನವೇ  ಮಹಾ ಶಿವರಾತ್ರಿ ಎಂದು ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ತೆಗ್ಗಿನ ಮಠದ ಆವರಣದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ ಎಂಬ ಭಕ್ತಿ ಪ್ರಧಾನ ನಾಟಕ ಪ್ರದರ್ಶನದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿಶ್ವದ ಮೂಲೆ ಮೂಲೆಗಳಲ್ಲಿ ಶಿವನ ದೇವಾಲಯಗಳಿದ್ದು, ಪೂರ್ವದ ಕಾಶಿಯಲ್ಲಿ ವಿಶ್ವನಾಥ,  ಪಶ್ಚಿಮದಲ್ಲಿ ಸೋಮನಾಥ, ಉತ್ತರದಲ್ಲಿ ಅಮರನಾಥ, ದಕ್ಷಿಣದಲ್ಲಿ ರಾಮೇಶ್ವರ, ಉಜ್ಜೈನಿಯಲ್ಲಿ ಮಹಾಕಾಲೇಶ್ವರ, ಹಿಮಾಲಯದಲ್ಲಿ ಕೇದರನಾಥ ಹಿಸಾರದಲ್ಲಿ ವೈದ್ಯನಾಥ, ಮಧ್ಯಪ್ರದೇಶದಲ್ಲಿ ಓಂಕಾರನಾಥ, ದ್ವಾರಕ ದಲ್ಲಿ ಭುವನೇಶ್ವರ ಸೇರಿದಂತೆ ವಿವಿಧೆಡೆ ಶಿವನನ್ನು ಕಾಣಬಹುದು. ಭಾರತೀಯರು ಆಚರಿಸುವ ಎಲ್ಲಾ ಹಬ್ಬ ಹರಿದಿನಗಳಲ್ಲಿ ಶಿವರಾತ್ರಿಯೇ ಸರ್ವಶ್ರೇಷ್ಠ, ಶಿವರಾತ್ರಿ ಯಂದು ಪತಿತ ಪಾವನನೂ, ಜ್ಞಾನೇ ಶ್ವರನೂ ಆದ ಸದಾಶಿವನು ಬಂದು ಭಕ್ತರ ತಾಪವನ್ನು ತೊಲಗಿಸಿ, ಪಾಪ, ಕೇಡು, ದುಃಖ, ಭಯ, ರೋಗ, ಭೂತ, ಪಿಶಾಚಿ ಗಳ ಕಾಟ. ಅಪಮೃತ್ಯು, ಅಶಾಂತಿಯ ಪರದಾಟವನ್ನು ಬಗೆಹರಿಸುತ್ತಾನೆ ಎಂದರು.

ಹೇಮರಡ್ಡಿ ಮಲ್ಲಮ್ಮ ಮಹಾಸಾದ್ವಿ. ಮಾನವ ಕುಲದಲ್ಲಿ ಹೆಣ್ಣಿನ ಸ್ಥಾನವನ್ನು ಉತ್ತುಂಗಕ್ಕೆ ಏರಿಸಿದವಳು, ಶಿವನನ್ನೇ ಪ್ರತ್ಯಕ್ಷವಾಗಿ ಕಂಡುವಳು.  ಹೇಮರಡ್ಡಿ ಮಲ್ಲಮ್ಮನ ಆದರ್ಶಗಳು ಸೂರ್ಯ, ಚಂದ್ರರು ಇರುವವರೆಗೆ ಶಾಶ್ವತವಾಗಿರುತ್ತದೆ ಎಂದರು.

ವಿಜಯಪುರದ ಉಪ ಅರಣ್ಯ ಸಂರಕ್ಷಾಣಾಧಿಕಾರಿ   ಡಾ. ಪ್ರಶಾಂತ್ ಪಿ.ಕೆ.ಎಂ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,  ವೈಜ್ಞಾನಿಕ ಯುಗದಲ್ಲಿ ಪ್ರತಿ ಕ್ಷೇತ್ರದಲ್ಲಿ ವಿಜ್ಞಾನದ ಸಾಧನೆಗಳು ಯಾವುದೇ  ವಸ್ತುವನ್ನು ಪರೀಕ್ಷಿಸುವ ಮತ್ತು ಸಂಶೋಧಿಸುವಲ್ಲಿ ತನ್ನ ಮಹತ್ವ ಪೂರ್ಣ ಜವಾಬ್ದಾರಿಯನ್ನು ನಿಭಾಯಿಸುತ್ತವೆ. ಆದರೆ ಪರಮಾತ್ಮನ ಕಾರ್ಯಶೈಲಿಯು ಸಂಪೂರ್ಣ ಭಿನ್ನವಾಗಿದೆ ಎಂದರು.

ತಹಶೀಲ್ದಾರ್ ಡಾ. ಶಿವಕುಮಾರ ಬಿರಾದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿಯಿಲ್ಲ ಎನ್ನುವ ಉಕ್ತಿಯಂತೆ ಶಿವನಿಗೆ ಸರ್ವೋತ್ತಮ ಶಕ್ತಿ, ಭಕ್ತಿಮಾರ್ಗದಲ್ಲಿ ನಾಮಸ್ಮರಣೆಗೆ ಬಹಳ ಮಹತ್ವವಿದ್ದು,  ತೆಗ್ಗಿನಮಠ ಸಾಮಾಜಿ ಕ ಶೈಕ್ಷಣಿಕ ಕ್ರಾಂತಿ ಮಾಡಿದೆ ಎಂದರು.

ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ. ಚಂದ್ರಶೇಖರಯ್ಯ ಮಾತನಾಡಿ, ತೆಗ್ಗಿನ ಮಠವು ಲಿಂ.ಚಂದ್ರಶೇಖರ ಶಿವಚಾರ್ಯರ ನಂತರ ಶ್ರೀ ಚಂದ್ರಮೌಳೇಶ್ವರ ಶಿವಾಚಾ ರ್ಯರು ಮೊದಲ ಆಚಾರ್ಯರಾಗಿ ನಂತರ ಪ್ರಾಚಾರ್ಯರಾಗಿ ತದನಂ ತರ ಶಿವಾಚಾರ್ಯರಾಗಿ ಸಂಸ್ಥೆ ಕಟ್ಟಿದರು. ರಾಜ್ಯದ 8 ಜಿಲ್ಲೆಗಳಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಹೆಗ್ಗಳಿಕೆ ತೆಗ್ಗಿನಮಠಕ್ಕಿದೆ ಎಂದರು.

ಪ್ರಶಸ್ತಿ ಪ್ರದಾನ : ಸಾಮಾಜಿಕ ಕ್ಷೇತ್ರದಲ್ಲಿ ಸಹಾಯಕ ಇಂಜಿನಿ ಯರ್ ಎಲ್. ಕುಬೇಂದ್ರನಾಯ್ಕ, ಧಾರ್ಮಿಕ ಕ್ಷೇತ್ರದಲ್ಲಿ  ಮಾನ್ಯರ ಮಸಲವಾಡದ ಶ್ರೀ ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಕಮಿಟಿ ಅಧ್ಯಕ್ಷ ಶ್ರೀಪಾದರವರಿಗೆ  ತೆಗ್ಗಿನಮಠ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ವೇಳೆ ಟಿ.ಎಂ. ಶಿವಕುಮಾರಸ್ವಾಮಿ, ಪಿ.ಕೆ.ಎಂ. ವಿಶ್ವಾನಂದಸ್ವಾಮಿ. ಪಿ.ಕೆ.ಎಂ. ನಾಗಲಿಂಗಯ್ಯ  ಬಿ.ಇ.ಡಿ ಕಾಲೇಜು ಪ್ರಾಚಾರ್ಯ ಟಿ.ಎಂ. ರಾಜಶೇಖರ್,  ಮೋತಿನಾಯ್ಕ,  ಫಾರ್ಮಸಿ ಕಾಲೇಜು ಪ್ರಾಚಾರ್ಯ ನಾಗೇಂದ್ರರಾವ್,  ಬಂಗಿ ಬಸಪ್ಪ  ಪಿಯು ಕಾಲೇಜು ಪ್ರಾಚಾರ್ಯ ಅರುಣಕುಮಾರ್ ಕೆ.ವಿ, ಉಪನ್ಯಾಸಕ ಕರಿಯಪ್ಪ, ನಿವೃತ್ತ ಮುಖ್ಯ ಶಿಕ್ಷಕ ಸಿ.ಎಂ. ಕೊಟ್ರಯ್ಯ ಸೇರಿದಂತೆ ಇತರರು ಇದ್ದರು. 

error: Content is protected !!