ಹರಪನಹಳ್ಳಿ, ಫೆ.14 – ತಾಲ್ಲೂಕಿನ ಬಾಗಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಕೆ. ನೀಲಮ್ಮ ಭರಮನಗೌಡ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಅಧ್ಯಕ್ಷರಾಗಿದ್ದ ಬಿ.ಬಿ. ನಾಗರಾಜ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದಿದ್ದು, ಒಟ್ಟು 16 ಜನ ಸದಸ್ಯರ ಫೈಕಿ 13 ಜನ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಹಾಜರಿದ್ದರು. ಕೆ. ನೀಲಮ್ಮ ಅವರು ಒಬ್ಬರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ಯಲ್ಲಿ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಡಾ. ಶಿವಕುಮಾರ್ ಬಿರಾದಾರ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ನೀಲಮ್ಮ ಅವರನ್ನು ಮುಖಂಡರಾದ ಕೀಲು, ಮೂಳೆ, ನಾಟಿ ವೈದ್ಯ, ಪಂಡಿತ್ ಬಿ.ಬಿ. ಹೊಸೂರಪ್ಪ, ಚಿಕ್ಕಳ್ಳಿ ನಾಗಣ್ಣ, ಚಿನ್ನಪ್ಪ, ವೀರೇಶ್, ಸಿ.ಪಿ. ಚಿದಾನಂದ, ಬಸವಲಿಂಗನಗೌಡ, ಬಸವನಗೌಡ, ಸಿ.ಪಿ. ಮಂಜುನಾಥ್, ಕೊಟ್ರೇಶ್, ಗಾಂಧಿ, ವೆಂಕಟೇಶ್, ಶಶಿ, ನಿಂಗಪ್ಪ, ಭರ್ಮಜ್ಜ, ಶರೀಫ್ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ. ನಾಗರಾಜ, ಉಪಾಧ್ಯಕ್ಷೆ ಗೀತಮ್ಮ, ಸದಸ್ಯರಾದ ಕೆ. ನಾಗರಾಜ, ಪೂಜಾರ ಹನುಮಂತಪ್ಪ, ರೇಣುಕಮ್ಮ, ಕರಿಯಮ್ಮ, ಕೊಟ್ರಮ್ಮ, ಹಸೀನಾಬಿ, ಮರಿಯಮ್ಮ, ಎನ್.ಮಂಜುನಾಥ್, ಶಿವರಾಮಪ್ಪ, ಬಸವರಾಜ, ಬಣಕಾರ ಮಂಜುನಾಥ್, ಬಡಿಗೇರ ಈರಣ್ಣ, ಚಿಕ್ಕಹಳ್ಳಿ ಮಂಜಣ್ಣ, ಕೋಡಿಹಳ್ಳಿ ರೇವಣ್ಣ, ಆಶಾ ಇತರರು ಇದ್ದರು.