ಹರಪನಹಳ್ಳಿ, ಫೆ. 8- ತಾಲೂಕಿನ ಅಡವಿಹಳ್ಳಿ-ತಿಪ್ಪನಾಯಕನಹಳ್ಳಿ ಗ್ರಾಮಕ್ಕೆ ಇರುವ ಸಂಪರ್ಕ ರಸ್ತೆಯು ಹಾಳುಬಿದ್ದು ಎರಡೂ ಬದಿಯಲ್ಲಿ ಜಂಗಲ್ ಬೆಳೆದು ರಸ್ತೆಗಳಲ್ಲಿ ಸಂಚರಿಸುವುದು ಭಾರೀ ಕಷ್ಟವಾಗಿತ್ತು. ಆದುದರಿಂದ ತಿಪ್ಪನಾಯಕನಹಳ್ಳಿ, ಅಡವಿಹಳ್ಳಿ ಗ್ರಾಮದ ಮುಖಂಡರು, ಹಿರಿಯರು, ಯುವಕರು ಎಲ್ಲರೂ ಸೇರಿ ಬಳ್ಳಾರಿ ಸಂಸದ ವೈ. ದೇವೇಂದ್ರಪ್ಪನವರ ಪುತ್ರ ವೈ.ಡಿ. ಅಣ್ಣಪ್ಪ ಅವರನ್ನು ಸಂಪರ್ಕಿಸಿ ರಸ್ತೆಯ ಹಾಗೂ ರೈತರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ವಿವರಿಸಿದರು.
ರಸ್ತೆಯನ್ನು ನಿರ್ಮಿಸಿ ಕೊಡುವಂತೆ ಗ್ರಾಮಸ್ಥರೆಲ್ಲರೂ ಸೇರಿ ಅಣ್ಣಪ್ಪನವರಲ್ಲಿ ಮನವಿ ಮಾಡಿಕೊಂಡಾಗ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಣ್ಣಪ್ಪ ತಮ್ಮ ಸ್ವಂತ ಖರ್ಚಿನಲ್ಲಿ ತಿಪ್ಪನಾಯಕನ ಹಳ್ಳಿ ಮತ್ತು ಅಡವಿಹಳ್ಳಿ ಗ್ರಾಮಕ್ಕೆ ರಸ್ತೆ ಬದಿಯಲ್ಲಿ ಇದ್ದಂತಹ ಜಂಗಲ್ ಅನ್ನು ಜೆಸಿಬಿ ಮೂಲಕ ತೆಗೆಸಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ.
ಈ ಸಂದರ್ಭದಲ್ಲಿ ತಿಪ್ಪನಾಯಕನಹಳ್ಳಿಯ ಮುಖಂಡರಾದ ತಿಮ್ಮಪ್ಪ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರಸನ್ನ ಕುಮಾರ್ ಕೊಟ್ರೇಶಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಫಕ್ಕೀರಪ್ಪ, ಸಿ ಆನಂದಪ್ಪ, ಎಂ ಫಕ್ಕೀರಪ್ಪ, ಹಾಲಪ್ಪ, ಸಿ .ಪರುಸಪ್ಪ, ಅಡಿವಿಹಳ್ಳಿ ದಕ್ಷಿಣ ಮೂರ್ತಿ, ಬಸಪ್ಪ, ಪೂಜಾರ್ ಮಂಜುನಾಥ್, ಪೂಜಾರ್ ರಾಜು ಬೆಣ್ಣಿಬಸಪ್ಪ, ವಿಜಯಲಕ್ಷ್ಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.