ಚನ್ನಗಿರಿ, ಜು.8- ಜಾಗತಿಕ ಲಿಂಗಾಯತ ಮಹಾಸಭೆ ಕೇಂದ್ರ ಕಚೇರಿ ಬೆಳಗಾವಿ ಇದರ ಚನ್ನಗಿರಿ ತಾಲ್ಲೂಕು ಘಟಕವನ್ನು ಪಾಂಡೊಮಟ್ಟಿಯ ವಿರಕ್ತ ಮಠದಲ್ಲಿ ಇತ್ತೀಚೆಗೆ ಉದ್ಘಾಟಿಸಲಾಯಿತು.
ಜಾಗತಿಕ ಲಿಂಗಾಯತ ಮಹಾಸಭೆಯು ಸಮಸ್ತ ಲಿಂಗಾಯತ ಧರ್ಮೀಯರ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಇದು ರಾಜ್ಯದ 21 ಜಿಲ್ಲೆಗಳಲ್ಲಿ ಸುಮಾರು 65 ತಾಲ್ಲೂಕು ಘಟಕಗಳನ್ನು ಹೊಂದಿದ್ದು, ಕೇವಲ ನಾಲ್ಕು ವರ್ಷಗಳಲ್ಲಿ ಸುಮಾರು 30 ಸಾವಿರ ಸದಸ್ಯರನ್ನು ಹೊಂದಿದ್ದು, ಲಿಂಗಾಯತ ಧರ್ಮದ ಅರಿವು ಆಚಾರಗಳ ಬಗ್ಗೆ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸುತ್ತಿದೆ.
ಕಳೆದ 2 ವರ್ಷಗಳ ಹಿಂದೆ ಉದ್ಘಾಟನೆಗೊಳ್ಳಬೇಕಾಗಿದ್ದ ಚನ್ನಗಿರಿ ತಾಲ್ಲೂಕು ಘಟಕವು ಕೊರೊನಾ ಸಲುವಾಗಿ ಈಗ ಪಾಂಡೋಮಟ್ಟಿ ಶ್ರೀ ಗುರು ಬಸವ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟನೆಗೊಂಡಿದೆ.
ಜಾಗತಿಕ ಲಿಂಗಾಯತ ಮಹಾಸಭಾ ದಾವಣಗೆರೆ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಆಯ್ಕೆಯಲ್ಲಿ ಈ ಕೆಳಗೆ ನಮೂದಿಸಿರುವ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರು : ಎಂ. ರಾಜಪ್ಪ ವಕೀಲರು ಕಂಚಿಗನಾಳ್, ಕಾರ್ಯಾಧ್ಯಕ್ಷರು : ಮರುಳಸಿದ್ದಪ್ಪ ಸಂತೇಬೆನ್ನೂರು, ಉಪಾಧ್ಯಕ್ಷರು : ಶರಣಪ್ಪ ಕೋಗಲೂರು, ಪ್ರಧಾನ ಕಾರ್ಯದರ್ಶಿ : ಕೆ.ಜಿ. ಶಿವಮೂರ್ತಿ ಪಾಂಡೊಮಟ್ಟಿ, ಕೋಶಾಧ್ಯಕ್ಷರು : ಜಿ.ಎನ್. ಸ್ವಾಮಿ ಲಿಂಗದಳ್ಳಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಅಗಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರುಳುಸಿ ದ್ದಯ್ಯ ಬಸವನಾಳು ಹಾಗೂ ಕಾರ್ಯಕಾರಿ ಸದಸ್ಯ ರಾದ ಅವರಗೆರೆ ರುದ್ರಮುನಿ, ಎನ್.ಎಸ್. ರಾಜು, ಶಿವಮೂರ್ತಿ, ಶಶಿಧರ ಬಸಾಪುರ, ಶ್ರೀಮತಿ ವೀಣಾ ಮಂಜುನಾಥ, ಶ್ರೀಮತಿ ವನಜಾಕ್ಷಿ ಮಹಾಲಿಂಗಪ್ಪ ಹಾಗೂ ಚನ್ನಗಿರಿ ತಾಲ್ಲೂಕಿನ ಸಮಾಜದ ಯುವಕರು ಭಾಗವಹಿಸಿ ತಾಲ್ಲೂಕಿನಾದ್ಯಂತ ಸದಸ್ವತ್ವ ಅಭಿಯಾನವನ್ನು ಕೈಗೊಳ್ಳುವುದಾಗಿ ತಿಳಿಸಿದರು.