ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಭಾರತ

ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆದ್ದ ಭಾರತ

ಅಹಮದಾಬಾದ್, ಮಾ.13- ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ  ಪ್ರವಾಸಿ ಆಸ್ಟ್ರೇಲಿಯಾ ಮತ್ತು  ಭಾರತ ತಂಡಗಳ ನಡುವೆ ನಡೆದ ಬಾರ್ಡರ್-ಗಾವಸ್ಕರ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯ ವಾಗಿದೆ. ಆಸ್ಟ್ರೇಲಿಯ ತಂಡವನ್ನು 2-1ರಿಂದ ಮಣಿಸಿ ರುವ ಭಾರತ ಕ್ರಿಕೆಟ್ ತಂಡವು  ಸರಣಿ ಜಯದ ಜೊತೆಗೆ ವಿಶ್ವ ಚಾಂಪಿಯನ್ ಶಿಪ್‌ಗೆ ಅರ್ಹತೆಯನ್ನು ಸಾಧಿಸಿದೆ.

ಐದು ದಿನಗಳ ಕಾಲ ಜರುಗಿದ ಪಂದ್ಯದಲ್ಲಿ ಎರಡೂ ತಂಡಗಳೂ ಬೃಹತ್ ಮೊತ್ತ ದಾಖಲಿಸಿದ್ದವು. ಆಸ್ಟ್ರೇಲಿಯಾ, ಉಸ್ಮಾನ ಖವಾಜ (180)  ಮತ್ತು ಕ್ಯಾಮ ರಾನ್ ಗ್ರೀನ್ (114) ಶತಕದಾಟದಿಂದ 480 ಬೃಹತ್ ಮೊತ್ತ ಗಳಿಸಿತ್ತು.  ಭಾರತ ತಂಡವು  ಸಹ ಶುಭ್ಮನ್ ಗಿಲ್ (128)   ಮತ್ತು ವಿರಾಟ್ ಕೊಹ್ಲಿ (186)   ಆಟದಿಂದ  571 ರನ್ನು ಗಳಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 91 ರನ್ನುಗಳ ಮುನ್ನಡೆ ಸಾಧಿಸಿತ್ತು.

ನಿನ್ನೆ ವಿಕೆಟ್ ನಷ್ಟವಿಲ್ಲದೆ 3ರನ್ನು ಗಳಿಸಿದ್ದ ಆಸ್ಟ್ರೇಲಿಯ ತಂಡವು  ಇಂದು ಉತ್ತಮ ಪ್ರದರ್ಶನ ನೀಡಿ ಕೇವಲ 2 ವಿಕೆಟ್‌ಗೆ  175 ಗಳಿಸಿ, ಡಿಕ್ಲೇರ್ ಮಾಡಿ ಕೊಳ್ಳುವ  ಮೂಲಕ  ಪಂದ್ಯ ಡ್ರಾ ಮಾಡಿ ಕೊಂಡಿತು.   ಈ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ   ಒಟ್ಟಾರೆ  1126 ರನ್ನುಗಳು ಹರಿದು ಬಂದವು. ಕಳೆದ ಮೂರು ಪಂದ್ಯಗಳು ಮೂರೇ ದಿನಕ್ಕೆ ಮುಕ್ತಾಯ ಕಂಡಿದ್ದವು, ಬೌಲರ್‌ಗಳು ಪಾರಮ್ಯ ಮೆರೆದಿದ್ದರು. ಸಂಕ್ಷಿಪ್ತ ಸ್ಕೋರು ವಿವರ: ಆಸ್ಟ್ರೇಲಿಯಾ- 480/10 ಮತ್ತು 175/2.  ಭಾರತ- 571/10.

error: Content is protected !!