ವಿದ್ಯುತ್ ಇಲ್ಲದೆ ನಾಡಕಚೇರಿಯಲ್ಲಿ ಸಮಸ್ಯೆ: ರೈತರಿಂದ ಪ್ರತಿಭಟನೆ

ಅರಸೀಕೆರೆ, ಸೆ.26- ಸ್ಥಳೀಯ ನಾಡಕಚೇರಿಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ, ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಜನಸಾಮಾನ್ಯರಿಗೆ ತುಂಬಾ ಅನಾನುಕೂಲವಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಕರಡಿದುರ್ಗದ ಚೌಡಪ್ಪ ನೇತೃತ್ವದಲ್ಲಿ ನಿನ್ನೆ ಪ್ರತಿಭಟನೆ ನಡೆಸಲಾಯಿತು.

ಸಂಘದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಉಪ ತಹಶೀಲ್ದಾರ್ ಫಾತಿಮಾ ಬೀ, ಒಂದು ವಾರದಿಂದ ಕಚೇರಿಯಲ್ಲಿ ಸೋಲಾರ್ ಕೆಟ್ಟು ನಿಂತಿರುವುದು ನಿಜ. ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ದುರಸ್ತಿ ಮಾಡಿಸಿ ಮಂಗಳವಾರದಿಂದಲೇ ಕಚೇರಿಯಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯಲಿವೆ ಎಂದು ತಿಳಿಸಿದರು. 

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕರಡಿದುರ್ಗದ ಚೌಡಪ್ಪ ಮಾತನಾಡಿದರು. ಆರ್‌.ಐ.    ಶಶಿಧರ್, ಹನುಮಂತ, ಕಾಳಪ್ಪ, ಚನ್ನಪ್ಪ, ಶಿವಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

error: Content is protected !!