ಬೆಳ್ಳೂಡಿ ಮಠಕ್ಕೆ ಪೀರನವಾಡಿ ಗ್ರಾಮಸ್ಥರು
ಮಲೇಬೆನ್ನೂರು,ಸೆ. 2- ಸಮಾಜ ಕಟ್ಟುತ್ತೇವೆ ಎಂಬ ಭರದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಕೆಲ ಮನಸ್ಥಿತಿ ಗಳು ತಮ್ಮ ನಡವಳಿಕೆಗಳನ್ನು ಬದಲಾಯಿಸಿಕೊಳ್ಳುವ ಅನಿ ವಾರ್ಯತೆ ಇದೆ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಕುರಿತು ಈಚೆಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಶ್ರೀಗಳು ಕುರುಬ ಸಮಾಜದ ಬಂಧುಗಳಿಗೆ ಎಚ್ಚರಿಕೆಯ ಕಿವಿಮಾತುಗಳನ್ನು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಸಮುದಾಯದ ದಾರ್ಶನಿಕರ ಪುತ್ಥಳಿ, ನಾಮ ಫಲಕಗಳನ್ನು ಸ್ಥಾಪಿಸುವಲ್ಲಿ ಕಾನೂನು ಪರಿಜ್ಞಾನ ಇಲ್ಲದೇ ಪ್ರಚೋದನಾಕಾರಿಯಾಗಿ ನಡೆದು ಕೊಳ್ಳುತ್ತಿರುವುದು ಶಾಂತಿ ಮತ್ತು ಪ್ರೀತಿಗೆ ಹೆಸರಾದ ನಮ್ಮ ಸಮುದಾಯಕ್ಕೆ ಕಪ್ಪುಚುಕ್ಕೆ ತರುತ್ತದೆ. ರಾಜ್ಯದ ಹತ್ತಾರು ಕಡೆ ಕಾನೂನಾತ್ಮಕವಾಗಿ ಅನು ಮತಿ ಪಡೆಯದೇ ದಾರ್ಶನಿಕರ ಪುತ್ಥಳಿ, ನಾಮಫಲಕ ಸ್ಥಾಪಿಸಲು ಮುಂದಾಗಿದ್ದು, ಕಾಣದ ಕೈಗಳ ಬೆಂಬಲದಿಂದ ಹೋರಾಟದ ಹಾದಿಯನ್ನು ತಪ್ಪಿಸಿ, ಸಮಾಜ ತಲೆತಗ್ಗಿಸು ವಂತೆ ಆಗುತ್ತಿರುವುದು ದುಃಖಕರ ಸಂಗತಿ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ಸಂಘಟನೆಗಳು, ಸಮುದಾಯದ ಶ್ರೀ ಕನಕ ಗುರು ಪೀಠದ ಸ್ವಾಮಿಗಳ ಜೊತೆಗೆ ಚರ್ಚಿಸಿ ಮತ್ತು ರಾಜಕೀಯ ಮುಖಂಡರುಗಳ ಗಮನಕ್ಕೆ ತರದೇ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದರು.
ಸಮಾಜಕ್ಕಾಗಿ ಏನೇ ಮಾಡುವುದಿದ್ದರೂ ತಾಲ್ಲೂಕು, ಜಿಲ್ಲಾ ಹಾಗೂ ಕೇಂದ್ರ ಸಂಘಟನೆ ಗಳೊಂದಿಗೆ ಮತ್ತು ಶ್ರೀಕನಕ ಗುರುಪೀಠದೊಂದಿಗೆ ಚರ್ಚಿಸಿ ನಿರ್ಣಯಗಳನ್ನು ಕೈಗೊಂಡು ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಬೇಕು. ವೈಯಕ್ತಿಕ ಹಿತಾಸಕ್ತಿಗಳಿಗೋಸ್ಕರ ಸಮುದಾಯವನ್ನು ಬಲಿಕೊಡುವ ಅಪವಾದ ಎಸಗಬೇಡಿ ಎಂದು ಶ್ರೀಗಳು ನೇರ ಎಚ್ಚರಿಕೆ ನೀಡಿದರು.
ನಮ್ಮ ಧಾರ್ಮಿಕತೆಯ ಭಕ್ತಿ ನ್ಯಾಯಾಂಗದ ಅಡಿಯಲ್ಲಿ ಪ್ರಜ್ವಲಿಸಬೇಕು. ನಮ್ಮವರು ಸ್ಥಳೀಯ ಶಾಂತಿ, ಕಾನೂನುಗಳನ್ನು ಉಳಿಸುವುದಕ್ಕೆ ಹೋರಾಟ ಮಾಡಿ ದಾರ್ಶನಿಕರಾಗಿದ್ದಾರೆ. ಆದರೆ, ಅಂತವರ ಹೆಸರಲ್ಲಿ ಕೆಲ ಸಂಘಟನೆಗಳು ಕಾನೂನಿಗೆ ವಿರುದ್ಧವಾಗಿ ಉದ್ಧಟತನ ತೋರಿ, ಯುವಕರನ್ನು ದಾರಿ ತಪ್ಪಿಸಬಾರದು. ನಾವುಗಳು ಈ ನೆಲದ ಕಾನೂನನ್ನು ಗೌರವಿಸಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವೂ ಕೂಡ ಆಗಿರುತ್ತದೆ. ನಾವುಗಳು ಇದ್ಯಾವುದನ್ನೂ ಪಾಲಿಸದೇ ನಮಗೆ ಇಷ್ಟಬಂದಂತೆ, ಮನಸ್ಸಿಗೆ ತೋಚಿದಂತೆ ಮೂರ್ತಿ ಅಥವಾ ನಾಮಫಲಕ ಗಳನ್ನು ಪ್ರತಿಷ್ಠಾಪಿಸುವುದು ಅಕ್ಷಮ್ಯ ಅಪರಾಧವಾಗುತ್ತದೆ. ಇಂತಹ ಘಟನೆಗಳನ್ನು ಬೇರೊಂದು ಸಂಘಟನೆಗಳು ಸಾಂದರ್ಭಿಕವಾಗಿ ದುರುಪಯೋಗ ಪಡಿಸಿಕೊಂಡು ನಮ್ಮ ಸಮಾಜಕ್ಕೆ ಕೆಟ್ಟ ಹೆಸರನ್ನು ತರಲು ಪ್ರಯತ್ನಿಸುತ್ತವೆ ಎಂಬ ಅರಿವನ್ನು ನಮ್ಮ ಸಮಾಜದ ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಕಿವಿಮಾತು ಹೇಳಿದ್ದಾರೆ.
ಮಠಕ್ಕೆ ಭೇಟಿ : ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮಸ್ಥರು ಬುಧವಾರ ಬೆಳ್ಳೂಡಿ ಶಾಖಾ ಮಠಕ್ಕೆ ಭೇಟಿ ನೀಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿ ಷ್ಠಾಪನೆ ವಿವಾದದ ಬಗ್ಗೆ ಶ್ರೀಗಳ ಜೊತೆ ಚರ್ಚಿಸಿದರು, ಏನೇ ಸಮಸ್ಯೆಗಳಿದ್ದರೂ ಕೂಡ ಕಾನೂನಾತ್ಮಕವಾಗಿ ಮತ್ತು ಶಾಂತಿ, ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ಶ್ರೀಗಳು ಕಿವಿ ಮಾತು ಹೇಳಿದರು.