ಹರಪನಹಳ್ಳಿ, ಸೆ.2- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೊರೊನಾ ಲಾಕ್ಡೌನ್ ಪರಿಹಾರ 5 ಸಾವಿರ ರೂಪಾಯಿ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಾರ್ಮಿಕ ಮುಖಂಡ ಹುಲಿಕಟ್ಟಿ ರಾಜಪ್ಪ ಮಾತನಾಡಿ ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದ ಲಾಕ್ಡೌನ್ ಅವಧಿಯಲ್ಲಿ ಸರ್ಕಾರ ಘೋಷಿಸಿದ 5 ಸಾವಿರ ಪರಿಹಾರ ಇಲ್ಲಿಯವರೆಗೂ ಬಹುತೇಕ ಕಾರ್ಮಿಕರಿಗೆ ಸಿಗದೇ ಪರದಾಡುತ್ತಿದ್ದಾರೆ. ಇಲಾಖೆ ನಿರ್ಲಕ್ಷ್ಯವಹಿಸಿದ್ದು, ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲ್ಲ ಎನ್ನುವಂತಾಗಿದೆ ಎಂದು ಆರೋಪಿಸಿದರು.
ಕೆ. ರಹಮತ್ ಉಲ್ಲಾ ಮಾತನಾಡಿ. ಈ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯ ಸಿಬ್ಬಂದಿ ವೈ.ಟಿ. ಅಶ್ವಿನಿ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಹೊಂಬಳಗಟ್ಟಿ ಶಿವಾನಂದ, ಸೈಫುಲ್ಲಾ, ಮನ್ಸೂರ್, ಭೋವಿ ದುರುಗಪ್ಪ, ಎಂ. ಶಬ್ಬೀರ್, ಕೆ.ಟಿ. ರಾಜಪ್ಪ ಇನ್ನಿತರೆ ಕಾರ್ಮಿಕರು ಹಾಜರಿದ್ದರು.