ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
ದಾವಣಗೆರೆ, ಆ.29- ಇಲ್ಲಿನ ಮೈಸೂರು ಸಿಲ್ಕ್ ಮಳಿಗೆಯನ್ನು ಸ್ಥಗಿತಗೊಳಿಸಲು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ತೀರ್ಮಾನಿಸಿರುವುದನ್ನು ಖಂಡಿಸಿ ನಗರದಲ್ಲಿ ನಿನ್ನೆ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹದಡಿ ರಸ್ತೆಯ ನಗರ ಪಾಲಿಕೆಯ ವಾಟರ್ ಟ್ಯಾಂಕ್ ಮಳಿಗೆ ಸಂಕೀರ್ಣದ ಮೈಸೂರು ಸಿಲ್ಕ್ ಮಳಿಗೆಯ ಮುಂಭಾಗದಲ್ಲಿ ಜಮಾಯಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಮೈಸೂರು ಸಿಲ್ಕ್ ಮಳಿಗೆಯ ಎತ್ತಂಗಡಿಗೆ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್ ಮಾತನಾಡಿ, ಮೈಸೂರು ಸಿಲ್ಕ್ ನಿಗಮದ ಮಳಿಗೆಯನ್ನು ತೆರವುಗೊಳಿಸಿದರೆ ಜಿಲ್ಲೆಯ ಮತ್ತು ಸುತ್ತಮುತ್ತಲಿನ ಜಿಲ್ಲೆಯ ಜನರಿಗೆ ತೊಂದರೆ ಆಗಲಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಕೆಎಸ್‍ಐಸಿ ಅಂದಿನ ಅಧ್ಯಕ್ಷ ಡಿ. ಬಸವರಾಜ್ ಅವರ ಮುತುವರ್ಜಿಯಿಂದ ನಗರದಲ್ಲಿ ಮೈಸೂರು ಸೀಲ್ಕ್ ಶೋ ರೂಂ ಅನ್ನು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಕೊಡುಗೆಯಾಗಿ ನೀಡಿದ್ದರು. ಈ ಮಾರಾಟ ಮಳಿಗೆ ಎತ್ತಂಗಡಿಯನ್ನು ಸರ್ಕಾರ ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಕೆಎಸ್ ಐಸಿ ಮಾಜಿ ಅಧ್ಯಕ್ಷ ಡಿ. ಬಸವರಾಜ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ಮಹಿಳಾ ಕಾಂಗ್ರೆಸ್ ದಕ್ಷಿಣದ ಅಧ್ಯಕ್ಷೆ ಶುಭಮಂಗಳ ಮಾತನಾಡಿದರು.
ಪ್ರತಿಭಟನೆಯಲ್ಲಿ ಸಂಘಟಿತ ಕಾರ್ಮಿಕ ಜಿಲ್ಲಾಧ್ಯಕ್ಷ ನಂಜನಾಯ್ಕ, ರಾಜ್ಯ ಕಾರ್ಯದರ್ಶಿ ಕೆ.ಸಿ. ಲಿಂಗರಾಜ್, ಕೆ.ಎಲ್. ಹರೀಶ್ ಬಸಾಪುರ, ಮಹಿಳಾ ಕಾಂಗ್ರೆಸ್‍ನ ಸುಷ್ಮಾ ಪಾಟೀಲ್, ಆಶಾ ಮುರಳಿ, ದ್ರಾಕ್ಷಾಯಣಮ್ಮ, ರಾಜೇಶ್ವರಿ ಉಮೇಶ್, ಕವಿತಾ ಚಂದ್ರಶೇಖರ್, ಸುನಿತಾ ಭೀಮಣ್ಣ, ಉಮಾಕುಮಾರ್, ಮಾಲತಿ ಬಾಯಿ, ಭಾಗ್ಯ ಪರಶುರಾಮ್, ಗೀತಾ ಚಂದ್ರಶೇಖರ್, ಕಾವೇರಿ, ದಿಲ್‍ಶಾ, ಲಿಯಾಖತ್ ಅಲಿ, ಎಚ್. ಹರೀಶ್, ರಂಗನಾಥಸ್ವಾಮಿ, ಯುವರಾಜ್, ಆರೋಗ್ಯಸ್ವಾಮಿ, ಕೆ.ಎಂ. ಮಂಜುನಾಥ್, ಸುರೇಶ್, ಅಶ್ರಫ್ ಆಲಿ, ಯೂನಿಸ್ ಅಹಮದ್, ಅಲ್ಲಾವಲಿ ಶಹಜಾಬ್, ಅಲ್ಲಾವಲಿ ಸಮೀರ್ ಸೇರಿದಂತೆ ಇತರರು ಭಾಗವಹಿಸಿದ್ದರು.