ನ್ಯಾಮತಿ, ಆ.29- ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾದಿಂದಾಗಿ ಧಾರ್ಮಿಕಾಚರಣೆಗಳು-ಹಬ್ಬ ಹರಿದಿನಗಳು ಸರಳವಾಗಿ ಆಚರಿಸಬೇಕಾಗಿ ಬಂದಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
ಹೊನ್ನಾಳಿ ತಾಲ್ಲೂಕು ಹೊಟ್ಯಾಪುರ ಉಜ್ಜಯಿನಿ ಶಾಖಾ ಹಿರೇಮಠದಲ್ಲಿ ಆಯೋಜಿಸಲಾಗಿದ್ದ ಎಳೆಗೌರಮ್ಮನ ಹಬ್ಬದ ಸರಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಜ್ಜಯಿನಿ ಶಾಖಾ ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಸ್ವಾಮಿಗಳು ಮಾತನಾಡಿ ವಿಶ್ವದೆಲ್ಲೆಡೆ ಮಾನವ ಸಮೂಹ ಪ್ರಾಕೃತಿಕ ವ್ಯಾಮೋಹಕ್ಕೆ ಒಳಗಾಗಿ ಧರ್ಮಮಾರ್ಗವನ್ನು ಮರೆತ ಪರಿಣಾಮ ಭಗವಂತ ತನಗೆ ಪೂಜಾರಾಧನೆ ಇಲ್ಲದಿದ್ದರೂ ಸರಿ, ಭೂ ತಾಯಿ ಮಡಿಲಲ್ಲಿನ ಭಾರವನ್ನು ತಗ್ಗಿಸುವ ಸಲುವಾಗಿ ಕೊರೊನಾ ಬಂದು ಸಾವು-ನೋವುಗಳಿಗೆ ಕಾರಣವಾಗಿದೆ. ಇನ್ನಾದರೂ ಮಾನವರು ಭಗವಂತ, ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣುವ ಮನೋಭಾವವನ್ನು ಮೈಗೂಡಿಸಿಕೊಂಡು ಧರ್ಮ ಮಾರ್ಗದಲ್ಲಿ ಸಾಗುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಶ್ರೀಮಠದ ಶಾಸ್ತ್ರಿಗಳ ಬಳಗದವರು ವೇದ ಘೋಷ ನಡೆಸಿಕೊಟ್ಟರು. ಗೌರಮ್ಮ ದೇವಿಗೆ ಪೂಜೆ ನೆರವೇರಿಸಿದರು.